ಕುಂಬಳೆ: ಅಯೋಧ್ಯೆ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಶ್ರೀರಾಮೋತ್ಸವ-2024 ಸಮಾರಂಭ ಸೋಮವಾರ ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಜರಗಿತು.
ದೀಪ ಪ್ರಜ್ವಲನೆ, ಭಜನೆ, ರಾಮತಾರಕ ಜಪ, ಅಯೋಧ್ಯೆ ಕರ ಸೇವಾಕರ್ತರಾದ ಕೃಷ್ಣ ಟೈಲರ್ ಪೆರ್ಮುದೆ, ಬಿ ಯಸ್ ಬಾಸ್ಕರ ರೈ ಬೆಟ್ಟಂಪಾಡಿ ಗುತ್ತು ಮತ್ತು ರಾಮಮಂದಿರ ರಥಯಾತ್ರೆಯಲ್ಲಿ ಭಾಗವಹಿಸಿದ 15 ಮಂದಿ ಕಾರ್ಯಕರ್ತರಿಗೆ ಗೌರವಾರ್ಪಣೆ ಹಾಗೂ ಅಯೋಧ್ಯೆಯ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಣೆ ಅನ್ನ ಸಂತರ್ಪಣೆಯ ಕಾರ್ಯಕ್ರಮದೊಂದಿಗೆ ಸಮಾರಂಭ ಯಶಸ್ವಿಯಾಯಿತು.
ಸಭಾಕಾರ್ಯಕ್ರಮದಲ್ಲಿ ಕೃಷ್ಣ ಟೈಲರ್ ಅವರು ಅಯೋಧ್ಯೆಯ ಕರಸೇವೆಯ ಅನುಭವ ಹಂಚಿಕೊಂಡರು. ಪೆರ್ಮುದೆ ಘಟಕದ ಸದಸ್ಯ ಕೇಶವ ಪ್ರಸಾದ ಎಡಕ್ಕಾನ, ಕೃಷ್ಣ ಕಿಶೋರ ಅಮ್ಮಂಕಲ್ಲು, ಹರಿಣಾಕ್ಷ ಪೆರಿಯಡ್ಕ, ಪೆರ್ಮುದೆ ಭಜನಾ ಸಂಘದ ಪ್ರಮುಖರು, ಮಾತೃ ಸಂಘದ ಸದಸ್ಯರು ಭಾಗವಹಿಸಿದ್ದರು. ತಿಮ್ಮಪ್ಪ ಬಾಳಿಕೆ ಸ್ವಾಗತಿಸಿ, ತುಕ್ರ ಪೆರಿಯಡ್ಕ ವಂದಿಸಿದರು.