HEALTH TIPS

ಜಗತ್ತಿನಲ್ಲೇ ಅತ್ಯಧಿಕ ಮಹಿಳಾ ಪೈಲೆಟ್‌ಗಳಿಗೆ ಪರವಾನಗಿ ನೀಡಿದ ಭಾರತ; ಡಿಜಿಸಿಎ

               ಮುಂಬೈ: ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು 2023ರಲ್ಲಿ 1,622 ಜನರಿಗೆ ಪೈಲಟ್ ಪರವಾನಗಿ ನೀಡಿದ್ದು, ಇದು ದಶಕದಲ್ಲೇ ಅತ್ಯಧಿಕ ಸಂಖ್ಯೆಯಾಗಿದೆ. ಜತೆಗೆ ಮಹಿಳಾ ಪೈಲಟ್‌ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ.

                ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಡಿಜಿಸಿಎ, '2022ರಲ್ಲಿ 1,165 ಪರವಾನಗಿಯನ್ನು ಡಿಜಿಸಿಎ ವಿತರಿಸಿತ್ತು.

               ವರ್ಷದಿಂದ ವರ್ಷಕ್ಕೆ ಪರವಾನಗಿ ನೀಡುವ ಸಂಖ್ಯೆ ಶೇ 39ರಷ್ಟು ಏರಿಕೆಯಾಗಿದೆ. ಇದರಲ್ಲಿ ಮಹಿಳೆಯರ ಸಂಖ್ಯೆ ಶೇ 22.5ರಷ್ಟು ಎಂದು ಡಿಜಿಸಿಎ ಹೆಳಿದೆ. ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳೆಯರು ಪೈಲಟ್‌ ಪರವಾನಗಿ ಪಡೆಯುತ್ತಿರುವುದು ಭಾರತದಲ್ಲೇ ಅತ್ಯಧಿಕ' ಎಂದಿದೆ.

'ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಯೋಜನೆಯೇ ಈ ಸಂಖ್ಯೆ ಏರಿಕೆಗೆ ಕಾರಣ. ಸದ್ಯ ವಿಮಾನ ಯಾನ ಕ್ಷೇತ್ರದಲ್ಲಿ ಮಹಿಳಾ ಪೈಲಟ್‌ಗಳ ಒಟ್ಟು ಸಂಖ್ಯೆ ಶೇ 14ರಷ್ಟಿದೆ' ಎಂದು ಹೇಳಿದೆ.

                  'ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾದ ನಂತರ ವಾಯುಯಾನ ಕ್ಷೇತ್ರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಏರ್ ಇಂಡಿಯಾ ಹಾಗೂ ಇಂಡಿಗೊ ಕಂಪನಿಗಳು ಹೆಚ್ಚಿನ ವಿಮಾನಗಳ ಖರೀದಿಗೆ ಮುಂದಾಗಿವೆ. ಇದರೊಂದಿಗೆ ಚಿಕ್ಕ ವಿಮಾನಯಾನ ಕಂಪನಿಗಳೂ ಹೊಸ ಚಾರ್ಟರ್‌ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಖರೀದಿ ನಡೆಸುತ್ತಿವೆ. ನಿರ್ದೇಶನಾಲಯವು ಇವುಗಳಿಗೆ ಅನುಮತಿ ನೀಡಿದೆ. ಹೆಲಿಕಾಪ್ಟರ್ ಹಾರಾಟ ತರಬೇತಿಗೆ ಹೊಸ ಕೇಂದ್ರಗಳಿಗೂ ಅನುಮತಿ ನೀಡಲಾಗುತ್ತಿದೆ' ಎಂದು ಹೇಳಿದೆ.

                  ಇದರೊಂದಿಗೆ ಹೆಲಿಕಾಪ್ಟರ್‌ಗಳ ಬಳಕೆ ತೀರ್ಥಕ್ಷೇತ್ರಗಳ ಯಾತ್ರೆ, ಏರ್‌ ಆಂಬುಲೆನ್ಸ್‌ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹೆಚ್ಚಾಗಲಿದೆ. ಸೇನೆಯ ಮಾಜಿ ಪೈಲೆಟ್‌ಗಳನ್ನು ಹೊರತುಪಡಿಸಿ ಹೆಚ್ಚುವರಿ ಪೈಲೆಟ್‌ಗಳ ನೇಮಕ ಈ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಿದಂತಾಗಿದೆ' ಎಂದು ಡಿಜಿಸಿಎ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries