ಬದಿಯಡ್ಕ: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಕುಂಬಳೆ ಉಪಜಿಲ್ಲಾ ಸಮ್ಮೇಳನ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿತು. ಕುಂಬಳೆ ಉಪ ಜಿಲ್ಲಾಧ್ಯಕ್ಷ ಸಿಯಾಬ್ ಮಾಸ್ತರ್ ಧ್ವಜಾರೋಹಣಗೈದರು.
ಬಳಿಕ ನಡೆದ ಉದ್ಘಾಟನಾ ಸಮಾರಂಭವನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆಎಸ್.. ಉದ್ಘಾಟಿಸಿ ಮಾತನಾಡಿ, ಕೆಪಿಎಸ್ ಟಿಎ ಅಧ್ಯಾಪರ ಸಂಘಟನೆ ಕೇರಳ ಸರ್ಕಾರದ ಶಿಕ್ಷಣ ವಿರೋಧಿ ನೀತಿ ಎದುರಾಗಿ , ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಹೋರಾಡುವ ಏಕೈಕ ಅಧ್ಯಾಪಕ ಸಂಘಟನೆಯಾಗಿದೆ ಎಂದರು.
ಉಪಜಿಲ್ಲಾ ಅಧ್ಯಕ್ಷ ಶಿಯಾಬ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಕಾನತ್ತೂರ್ ಮುಖ್ಯ ಭಾಷಣ ಮಾಡಿದರು.
ಕಾಂಗ್ರೆಸ್ಸಿನ ಹಿರಿಯ ನೇತಾರ ಪಿಜಿ ಚಂದ್ರಹಾಸ ರೈ, ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಜಿಲ್ಲಾ ಜೊತೆ ಕಾರ್ಯದರ್ಶಿ ಗೋಪಾಲ ಮಾಸ್ತರ್, ಕೆಪಿಎಸ್‍ಟಿಎ ರಾಜ್ಯ ಭಾಷಾ ಅಲ್ಪಸಂಖ್ಯಾತ ಸೆಲ್ ಸಂಚಾಲಕ ನಿರಂಜನ ರೈ ಪೆರಡಾಲ, ಪಿಂಚಣಿ ಸಂಘದ ಬದಿಯಡ್ಕ ಮಂಡಲ ಅಧ್ಯಕ್ಷ ಚಂದ್ರಹಾಸ ನಂಬಿಯಾರ್ ಶುಭಹಾರೈಸಿದರು, ಜಿಲ್ಲಾ ಕಾರ್ಯದರ್ಶಿ ಶರತ್ಚಂದ್ರ ಶೆಟ್ಟಿ ಶೇಣಿ ಸ್ವಾಗತಿಸಿ, ಕೌನ್ಸಿಲರ್ ಮಲ್ಲಿಕಾ ಪಿ.ವಿ. ವಂದಿಸಿದರು.
ನಂತರ ನಡೆದ ವಿದ್ಯಾಭ್ಯಾಸ ಸಮ್ಮೇಳನವನ್ನು ಕೆಪಿಎಸ್ ಟಿಎ ರಾಜ್ಯ ಸಮಿತಿ ಕಾರ್ಯಕಾರಿ ಸದಸ್ಯ ಎ ವಿ ಗಿರೀಶ ಉದ್ಘಾಟಿಸಿದರು. ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಕಾರ್ಯದರ್ಶಿ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು . ಜಿಲ್ಲಾ ಉಪಾಧ್ಯಕ್ಷ ವೇಣು. ಸಿಕೆ. ಮಾಸ್ತರ್ ತರಗತಿ ನಡೆಸಿದರು. ಗಿರೀಶ್ ಬಾಬು ಶುಭ ಹಾರೈಸಿದರು.
ಉಪಜಿಲ್ಲಾ ಜೊತೆ ಕಾರ್ಯದರ್ಶಿ ಶ್ರೀಧರ ಶೇಣಿ ಸ್ವಾಗತಿಸಿ, ಸದಸ್ಯೆ .ಬುಸ್ರಾ ಶರೀಫ್ ವಂದಿಸಿದರು. ಬಳಿಕ ನಡೆದ ಪ್ರತಿನಿಧಿ ಸಮ್ಮೇಳನವನ್ನು ಸರ್ವಿಸ್ ಫಾರಂ ರಾಜ್ಯ ಸಮಿತಿ ಅಧ್ಯಕ್ಷ ಯೂಸುಫ್ ಕೆ.ಉದ್ಘಾಟಿಸಿದರು. ವಿದ್ಯಾಭ್ಯಾಸ ಜಿಲ್ಲಾ ಕೋಶಾಧಿಕಾರಿ ಎ.ರಾಧಾಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. .ಜಿಲ್ಲಾ ಜೊತೆ ಕಾರ್ಯದರ್ಶಿ ಸ್ವಪ್ನ ಜಾರ್ಜ್, ಮಧೂರು ಮಂಡಲ ಕಾಂಗ್ರೆಸ್ ಅಧ್ಯಕ್ಷ ವಿನೋದ್ ನಂದಕುಮಾರ್, ಲತೇಶ್ ಮಾಸ್ತರ್, ಓಮನ. ಬಿ ಆನಂದ, ತಸ್ನಿ ಟೀಚರ್ ಶುಭಹಾರೈಸಿದರು. ಉಪ ಜಿಲ್ಲಾ ಕಾರ್ಯದರ್ಶಿ ಶರತ್ ಚಂದ್ರ ಶೆಟ್ಟಿ ವಾರ್ಷಿಕ ವರದಿ ಆಯವ್ಯಯ ಮಂಡಿಸಿದರು.. ನೂತನ ಸಮಿತಿ ರೂಪಿಕರಿಸಲಾಯಿತು.. ನೂತನ ಕಾರ್ಯದರ್ಶಿ ಸಂತೋಷ್ ಮಾಸ್ತರ್ ಶೇಣಿ ವಂದಿಸಿದರು.