ಧೇಕಿಯಾಜುಲಿ: ದೇಶದ ಈಶಾನ್ಯ ಭಾಗದಲ್ಲಿ ಶಾಂತಿ ಮತ್ತು ಅಭಿವೃದ್ಧಿಯನ್ನು ತರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಯಶಸ್ವಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಧೇಕಿಯಾಜುಲಿ: ದೇಶದ ಈಶಾನ್ಯ ಭಾಗದಲ್ಲಿ ಶಾಂತಿ ಮತ್ತು ಅಭಿವೃದ್ಧಿಯನ್ನು ತರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಯಶಸ್ವಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಅಖಿಲ ಬಾಥೌ ಮಹಾಸಭಾದ 13ನೇ ತ್ರೈವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಪಕ್ಷವು ಸಮಸ್ಯೆಗಳನ್ನು ಪರಿಹರಿಸುವುದರ ಬದಲಿಗೆ ಗಮನವನ್ನು ಬೇರೆಡೆ ಸೆಳೆಯುವಂತೆ ಮಾಡಿ, ಅಧಿಕಾರ ಅನುಭವಿಸುವ ನೀತಿ ಅನುಸರಿಸಿತು.
'ನಾನು ಗೃಹ ಸಚಿವನಾದಾಗ ಇಲ್ಲಿ ಬೋಡೊ ಚಳವಳಿ ನಡೆಯುತ್ತಿತ್ತು. ನಾನು ಈಶಾನ್ಯ ಭಾಗದ ಜನರ ಪ್ರಮುಖ ಸಮಸ್ಯೆ ಮತ್ತು ಬೇಡಿಕೆಯನ್ನು ತಿಳಿದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ' ಎಂದರು.
'ಪ್ರಧಾನಿ ನರೇಂದ್ರ ಮೋದಿ ಇದನ್ನು ಹೊಸ ದೃಷ್ಟಿಕೋನದಿಂದ ನೋಡಿದ ಪರಿಣಾಮ ಬೋಡೊಲ್ಯಾಂಡ್ ಸಮಸ್ಯೆಗಳು ಪರಿಹಾರವಾಗಿವೆ. ಈಗ ಈ ಪ್ರದೇಶವು ಬಾಂಬ್ ಸ್ಫೋಟಗಳು, ಗುಂಡಿನ ದಾಳಿ ಮತ್ತು ಹಿಂಸಾಚಾರದಿಂದ ಮುಕ್ತವಾಗಿದೆ' ಎಂದು ಅಮಿತ್ ಶಾ ಹೇಳಿದರು.
'ಕಳೆದ ಮೂರು ವರ್ಷಗಳಲ್ಲಿ ಗಮನಿಸಿದರೆ ಬೋಡೊಲ್ಯಾಂಡ್‌ನಲ್ಲಿ ಯಾವುದೇ ಹಿಂಸಾಚಾರದ ಘಟನೆಗಳು ನಡೆದಿಲ್ಲ. ಬದಲಿಗೆ ಇದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ' ಎಂದು ಅವರು ಪ್ರತಿಪಾದಿಸಿದರು.