ತ್ರಿಶೂರ್: ಜನವರಿ 17ರಂದು ಗುರುವಾಯೂರಿಗೆ ಪ್ರಧಾನಿಯವರು ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ . ಭದ್ರತಾ ವ್ಯವಸ್ಥೆಗಳ ಭಾಗವಾಗಿ ಪ್ರಧಾನಿ ಹೆಲಿಕಾಪ್ಟರ್ ನಲ್ಲಿ ಆಗಮಿಸುವರು.
ಗುರುವಾಯೂರಿನಿಂದ ಶ್ರೀಕೃಷ್ಣ ಕಾಲೇಜು ಹೆಲಿಪ್ಯಾಡ್ ತಲುಪುವರು. ಅಲ್ಲಿಂದ ವಳಪಾಡ್ ಶಾಲಾ ಮೈದಾನದಲ್ಲಿರುವ ಹೆಲಿಪ್ಯಾಡ್‍ಗೆ ಬಂದಿಳಿದು ನಂತರ ತ್ರಿಪ್ರಯಾರ್ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಪ್ರಧಾನಿಯವರ ಭೇಟಿ ಹಿನ್ನೆಲೆಯಲ್ಲಿ ತ್ರಿಪ್ರಯಾರ್ ದೇವಸ್ಥಾನದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 17ರಂದು ಬೆಳಗ್ಗೆ ಗುರುವಾಯೂರಿಗೆ ಆಗಮಿಸಿ ದರ್ಶನ ಪಡೆದ ಬಳಿಕ ಸುರೇಶ್ ಗೋಪಿ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ನಂತರ ತ್ರಿಪ್ರಯಾರ್ ಶ್ರೀರಾಮ ದೇವಸ್ಥಾನಕ್ಕೆ ಭೇಟಿ ನೀಡಲಿರುವರು.
ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಪ್ರಧಾನಿಯವರು ಕೊಚ್ಚಿನ್ ಶಿಪ್‍ಯಾರ್ಡ್‍ನಲ್ಲಿ ಅಂತರಾಷ್ಟ್ರೀಯ ಹಡಗು ದುರಸ್ತಿ ಸೌಲಭ್ಯ ಮತ್ತು ಡ್ರೈ ಡಾಕ್ ಅನ್ನು ಉದ್ಘಾಟಿಸಲಿದ್ದಾರೆ.