ಕುಂಬಳೆ: ತಂತ್ರಜ್ಞಾನ ಜಗತ್ತಿನ ಹೊಸ ಯುಗದಲ್ಲಿ ಹಲವು ಭೀತಿಗಳ ನಡುವೆಯೂ ಪುಸ್ತಕ ಓದುವ ಪ್ರಸ್ತುತತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಓದು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ಹೇಳಿದರು.
ಶಾಸಕರ 2023-24ನೇ ವರ್ಷದ ಯೋಜನೆಯಲ್ಲಿ ಸೇರಿಸಲಾದ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲೆಗಳು ಮತ್ತು ಅಂಗೀಕೃತ ಗ್ರಂಥಾಲಯಗಳಿಗೆ ಕೊಡಮಾಡಿದ ಪುಸ್ತಕಗಳನ್ನು ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸೋಮವಾರ ನಡೆದ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದಲ್ಲಿ ಗ್ರಂಥಾಲಯ ಆಂದೋಲನಕ್ಕೆ ಪಿ.ಎನ್.ಪಣಿಕ್ಕರ್ ಅವರ ಕೊಡುಗೆ- ತ್ಯಾಗಗಳನ್ನು ಮಾನಸಿ ಅಂದು ಇಲಾಖಾ ಸಚಿವರಾಗಿದ್ದ ಸಿ.ಎಚ್.ಮಹಮ್ಮದ್ ಕೋಯಾ ಅವರು ಬೆಂಬಲ ನೀಡಿದ್ದರು ಎಂದು ಸಂಸದರು ಹೇಳಿದರು. ಓದಿಗೆ ಉತ್ತೇಜನ ನೀಡುವ ಗ್ರಂಥಪಾಲಕರ ಕಾರ್ಯವನ್ನು ಸಂಸದರು ಶ್ಲಾಘಿಸಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್, ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಬಿ.ಎ.ರಹ್ಮಾನ್ ಆರಿಕ್ಕಾಡಿ, ಯೂಸುಫ್ ಉಳುವಾರ್, ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್, ಪ್ರಾಂಶುಪಾಲ ರವಿ ಮಾಸ್ತರ್, ಸಾಹಿತಿ ಕೆ.ಎಂ.ಅಬ್ಬಾಸ್, ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ.ಕೆ.ಅಹ್ಮದ್ ಹುಸೈನ್, ಅಝೀಝ್ ಮರಿಕೆ, ಅಬ್ದುಲ್ ಕಾದರ್ ವಿಲ್ರೋಡಿ, ಬಿ.ಎನ್.ಮಹಮ್ಮದಾಲಿ, ಅಶ್ರಫ್ ಕೋಡಿಯಮ್ಮೆ, ಅಹ್ಮದಲಿ ಕುಂಬಳೆ, ಮೊಯ್ತೀನ್ ಅಜೀಜ್ ಹಾಗೂ ಕೆ.ವಿ.ಯೂಸುಫ್ ಮಾತನಾಡಿದರು. ಶಾಲಾ ಪಿಟಿಎ ಅಧ್ಯಕ್ಷ ಎ.ಕೆ.ಆರಿಫ್ ಸ್ವಾಗತಿಸಿ, ವಂದಿಸಿದರು.