ಕಣ್ಣೂರು: ರೈಲು ಪ್ರಯಾಣದ ವೇಳೆ ಟೀ ಆಕಸ್ಮಿಕವಾಗಿ ಮೈಮೇಲೆ ಬಿದ್ದು ಏಳು ವರ್ಷದ ಬಾಲಕ ಸುಟ್ಟು ಗಾಯಗೊಂಡ ಘಟನೆ ಕಣ್ಣೂರಿನಲ್ಲಿ ನಡೆದಿದ್ದು, ಮಕ್ಕಳ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದೆ.
ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ಆಯೋಗವು ಪಾಲಕ್ಕಾಡ್ ವಿಭಾಗೀಯ ವ್ಯವಸ್ಥಾಪಕ, ರೈಲ್ವೆ ಮತ್ತು ಕಣ್ಣೂರು ಪೋಲೀಸರಿಂದ ತಕ್ಷಣದ ವರದಿಯನ್ನು ಕೇಳಿದೆ. ಘಟನೆ ಜನವರಿ 3 ರಂದು ನಡೆದಿತ್ತು. ತಲಶ್ಶೇರಿ ಮೂಲದ ಮಗುವಿನ ಕಾಲು ಮತ್ತು ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಮಗು ತನ್ನ ತಾಯಿಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿತ್ತು. ರೈಲು ಕಣ್ಣೂರು ತಲುಪಿದಾಗ ಸಹಪ್ರಯಾಣಿಕನ ಕೈಯಿಂದ ಟೀ ಬಿದ್ದು ಮಗುವಿನ ಕಾಲು ಮತ್ತು ಕೈ ಸುಟ್ಟು ಕರಕಲಾಗಿದೆ. ಈ ಮಾಹಿತಿಯನ್ನು ಟಿಟಿಆರ್‍ಗೆ ತಿಳಿಸಿದಾಗ ಠಾಣಾಧಿಕಾರಿಯನ್ನು ಭೇಟಿಯಾಗುವಂತೆ ತಿಳಿಸಲಾಯಿತು. ನಂತರ ತಾಯಿ ಮತ್ತು ಮಗು ಠಾಣಾಧಿಕಾರಿಗೆ ಮಾಹಿತಿ ನೀಡಿದರು.
ಘಟನೆಯಲ್ಲಿ ಮಕ್ಕಳ ಹಕ್ಕು ಆಯೋಗ ಸ್ವಯಂಪ್ರೇರಿತವಾಗಿ ಮಧ್ಯಪ್ರವೇಶಿಸಿದೆ. ಮಕ್ಕಳ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿಕೊಳ್ಳುತ್ತಿರುವಂತೆ ಸಹ ಪ್ರಯಾಣಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮಕ್ಕಳ ಹಕ್ಕು ಆಯೋಗವು ಪಾಲಕ್ಕಾಡ್ ವಿಭಾಗೀಯ ವ್ಯವಸ್ಥಾಪಕರು ಮತ್ತು ರೈಲ್ವೆ ಮತ್ತು ಕಣ್ಣೂರು ಪೋಲೀಸರಿಂದ ತಕ್ಷಣ ವರದಿ ಕೇಳಿದೆ.