ಜೈಪುರ: ಜೋಧಪುರ-ಭೋಪಾಲ್ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಕೋಟಾ ಜಂಕ್ಷನ್ ಬಳಿ ಹಳಿತಪ್ಪಿವೆ.
ಕೋಟಾ ಜಂಕ್ಷನ್ ಬಳಿ ಶುಕ್ರವಾರ ತಡರಾತ್ರಿ ರೈಲಿನ ಬೋಗಿಗಳು ಹಳಿತಪ್ಪಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
ದುರಸ್ತಿ ಕಾರ್ಯ ನಡೆಯುತ್ತಿರುವ ವಿಡಿಯೊ ಮತ್ತು ಫೋಟೊಗಳನ್ನು ಸುದ್ದಿಸಂಸ್ಥೆ 'ಎಎನ್‌ಐ' ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.