ಕೊಚ್ಚಿ: ಶರೋನ್ ಹತ್ಯೆ ಪ್ರಕರಣದಲ್ಲಿ ಕ್ರೈಂ ಬ್ರಾಂಚ್ ಡಿವೈಎಸ್ಪಿ ಸಲ್ಲಿಸಿರುವ ಅಂತಿಮ ವರದಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಆರೋಪಿ ಗ್ರೀಷ್ಮಾ ಸೇರಿದಂತೆ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಸರ್ಕಾರದಿಂದ ವಿವರಣೆ ಕೇಳಿದರು.
ನೆಯ್ಯಟ್ಟಿಂಗರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶ, ಪೋಲೀಸರು ಸಲ್ಲಿಸಿರುವ ಅಂತಿಮ ವರದಿ ಮತ್ತು ನಂತರದ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಗ್ರೀಷ್ಮಾಳÀನ್ನು ಹೊರತುಪಡಿಸಿ, ಪ್ರಕರಣದ ಎರಡು ಮತ್ತು ಮೂರನೇ ಆರೋಪಿಗಳಾದ ತಾಯಿ ಸಿಂಧು ಮತ್ತು ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್ ಅರ್ಜಿದಾರರು. ೨೨ರಂದು ಮತ್ತೆ ಅರ್ಜಿ ವಿಚಾರಣೆ ನಡೆಯಲಿದೆ.
ಇದಕ್ಕೂ ಮುನ್ನ ಅಂತಿಮ ವರದಿಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ವಿಷಯವನ್ನು ವಿಚಾರಣಾ ನ್ಯಾಯಾಲಯದಲ್ಲಿ ಪ್ರಸ್ತಾಪಿಸುವಂತೆ ಸೂಚಿಸಿ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿತು. ನಂತರದ ಅರ್ಜಿಯು ವಿಚಾರಣಾ ನ್ಯಾಯಾಲಯದ ತಿರಸ್ಕಾರದ ವಿರುದ್ಧ ಹೈಕೋರ್ಟ್ಗೆ ಬಂದಿದೆ.
೨೦೨೨ ರ ಅಕ್ಟೋಬರ್ ೧೪ ರಂದು, ವಿವಾಹ ಆಲೋಚನೆಯಿಂದ ಹಿಂದೆ ಸರಿಯಲು ನಿರಾಕರಿಸಿದ ನಂತರ, ಗ್ರೀಷ್ಮಾ ತನ್ನ ಗೆಳೆಯ ಶರೋನ್ ರಾಜ್ ನನ್ನು ತನ್ನ ಮನೆಗೆ ಕರೆದು ಮದ್ದುಗಳಲ್ಲಿ ಕಳೆನಾಶಕವನ್ನು ಬೆರೆಸಿ ಕೊಲೆಗೈದಿದ್ದಳು.