ಪೋರ್ಟ್‌ಲೆಂಡ್ : ಅಮೆರಿಕದ ಅಲಸ್ಕಾ ಏರ್‌ಲೈನ್ಸ್‌ನ ಬೋಯಿಂಗ್ 737-9 ಮ್ಯಾಕ್ಸ್ ವಿಮಾನವೊಂದು ಶುಕ್ರವಾರ ಹಾರಾಟ ನಡೆಸುತ್ತಿದ್ದ ವೇಳೆಯೇ ಅದರ ಒಂದು ಕಿಟಕಿ, ಮತ್ತೊಂದು ಭಾಗ ಹಾರಿಹೋಗಿದೆ. ವಿಮಾನವನ್ನು ಪೋರ್ಟ್‌ಲೆಂಡ್‌ನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ.
ಪೋರ್ಟ್‌ಲೆಂಡ್ : ಅಮೆರಿಕದ ಅಲಸ್ಕಾ ಏರ್‌ಲೈನ್ಸ್‌ನ ಬೋಯಿಂಗ್ 737-9 ಮ್ಯಾಕ್ಸ್ ವಿಮಾನವೊಂದು ಶುಕ್ರವಾರ ಹಾರಾಟ ನಡೆಸುತ್ತಿದ್ದ ವೇಳೆಯೇ ಅದರ ಒಂದು ಕಿಟಕಿ, ಮತ್ತೊಂದು ಭಾಗ ಹಾರಿಹೋಗಿದೆ. ವಿಮಾನವನ್ನು ಪೋರ್ಟ್‌ಲೆಂಡ್‌ನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ.
ವಿಮಾನ 1282ರಲ್ಲಿ 174 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು. ಘಟನೆ ಬಳಿಕ ಅವರಿಗೆ ಆಮ್ಲಜನಕ ಮಾಸ್ಕ್‌ಗಳನ್ನು ನೀಡಿದ್ದು ಚಿತ್ರಗಳಲ್ಲಿ ಕಂಡುಬಂದಿದೆ. ಘಟನೆಗೆ ಕಾರಣ, ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬ ಕುರಿತು ವಿಮಾನಯಾನ ಸಂಸ್ಥೆಯು ಸದ್ಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ.
ಘಟನೆ ಬಳಿಕ ಅಲಸ್ಕಾ ಏರ್‌ಲೈನ್ಸ್ ಮುಂಜಾಗ್ರತಾ ಕ್ರಮವಾಗಿ ತನ್ನ ಎಲ್ಲಾ ಬೋಯಿಂಗ್ 737-9 ವಿಮಾನಗಳನ್ನು ತಾತ್ಕಾಲಿಕವಾಗಿ ಭೂಸ್ಪರ್ಶ ಮಾಡಿಸಿದೆ. ವಿಮಾನಗಳನ್ನು ಸಂಪೂರ್ಣವಾಗಿ ತಪಾಸಣೆಗೊಳಪಡಿಸಿದ ಬಳಿಕವೇ ಅವುಗಳನ್ನು ಸೇವೆಗೆ ಮರಳಿಸಲಾಗುತ್ತದೆ ಎಂದು ಸಂಸ್ಥೆಯ ಸಿಇಒ ಬೆನ್ ಮಿನುಕುಸಿ ಹೇಳಿದ್ದಾರೆ.
ಶುಕ್ರವಾರ ಸಂಜೆ 5.07ಕ್ಕೆ ವಿಮಾನವು ಪೋರ್ಟ್‌ಲೆಂಡ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಟೇಕ್‌ಆಫ್ ಆದ ಆರು ನಿಮಿಷಗಳಲ್ಲಿ ಕಿಟಕಿ ಹಾರಿ, ವಿಮಾನದಲ್ಲಿಯ ಒತ್ತಡ ಇಳಿಕೆಯಾಯಿತು. ಈ ವೇಳೆ ಇದು 4,876 ಮೀಟರ್ ಎತ್ತರದಲ್ಲಿತ್ತು. ಕೂಡಲೇ ಪೈಲಟ್ ವಿಮಾನವನ್ನು ಪೋರ್ಟ್‌ಲೆಂಡ್ ವಿಮಾನ ನಿಲ್ದಾಣದೆಡೆಗೆ ತಿರುಗಿಸಿದರು. ಸಂಜೆ 5.26ಕ್ಕೆ ವಿಮಾನ ಭೂಸ್ಪರ್ಶ ಮಾಡಿದೆ ಎಂದು ಫ್ಲೈಟ್‌ಅವೇರ್ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.
ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ಘಟನೆಗೆ ಕಾರಣವೇನೆಂದು ತಿಳಿದ ಕೂಡಲೇ ಮಾಹಿತಿ ನೀಡಲಾಗುವುದು ಎಂದು ಅಮೆರಿಕದ ದಿ ನ್ಯಾಷನಲ್ ಟ್ರಾನ್ಸ್‌ಪೊರೇಷನ್ ಸೇಫ್ಟಿ ಬೋರ್ಡ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ತನಿಖೆ ನಡೆಸುವುದಾಗಿ ಅಮೆರಿಕದ ನಾಗರಿಕ ವಾಯುಯಾನ ಪ್ರಾಧಿಕಾರ ತಿಳಿಸಿದೆ.