ಕಾಸರಗೋಡು: ಪೊಲೀಸ್ ವಿಭಾಗೀಯ ಕಾಸರಗೋಡು ವಲಯದಲ್ಲಿ ಡಿವೈಎಸ್ಪಿ ಹುದ್ದೆ ಬದಲು ಇನ್ನುಮುಂದೆ ಐಪಿಎಸ್ ಶ್ರೇಣಿಯ ಉಪ ಪೊಲೀಸ್ ವರಿಷ್ಟಧಿಕಾರಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕಾಸರಗೋಡು ಡಿವೈಎಸ್‍ಪಿ ಪಿ.ಕೆ ಸುಧಾಕರನ್ ಡಿ. 31ರಂದು ಸೇವೆಯಿಂದ ನಿವೃತ್ತರಾಗಿದ್ದು, ಇವರ ಬದಲು ಐಪಿಎಸ್ ಶ್ರೇಣಿಯ ಎಎಸ್‍ಪಿ ಅಧಿಕಾರ ವಹಿಸಿಕೊಳ್ಳಲಿದ್ದು, ಹೊಸ ಎಎಸ್‍ಪಿ ಅಧಿಕೃತ ನೇಮಕಾತಿ ವರೆಗೆ ಬೇಕಲ ಡಿವೈಎಸ್‍ಪಿ ಸಿ.ಕೆ ಸುನಿಲ್ ಕುಮಾರ್ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ಕನ್ನಡತಿ ಡಿ. ಶಿಲ್ಪಾ ಅವರನ್ನು ಕಾಸರಗೋಡು ಎಎಸ್‍ಪಿಯಾಗಿ ನೇಮಿಸಲಾಗಿದ್ದು, ಕೆಲವೇ ತಿಂಗಳಲ್ಲಿ ಅವರು ಎಸ್‍ಪಿಯಾಗಿ ಬಡ್ತಿ ಹೊಂದಿದ್ದರು. ನಂತರ ಐಪಿಎಸ್ ಶ್ರೇಣಿಯ ಅಧಿಕಾರಿಗಳ್ಯಾರನ್ನೂ ಎಎಸ್‍ಪಿಯಾಗಿ ನೇಮಿಸಿರಲಿಲ್ಲ.