ಕಾಸರಗೋಡು: ರಾಜ್ಯ ಅಲ್ಪಸಂಖ್ಯಾತರ ಆಯೋಗವು ಫೆಬ್ರವರಿ ಎರಡನೇ ವಾರದಲ್ಲಿ ಜಿಲ್ಲೆಯಲ್ಲಿ ವಿಚಾರ ಸಂಕಿರಣ ಆಯೋಜಿಸಲಿದ್ದು, ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರು ವಿಚಾರಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪಿ.ರೋಜಾ, ಎ.ಸೈಫುದ್ದೀನ್ ಹಾಜಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಣಾಂಗಣದಲ್ಲಿ ವಿಚಾರ ಸಂಕಿರಣದ ಕುರಿತು ಅವಲೋಕನ ನಡೆಯಿತು. ಅಲ್ಪಸಂಖ್ಯಾತರಿಗೆ ಆಡಳಿತಾತ್ಮಕವಾಗಿ ನೀಡಿರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಚಾರಸಂಕಿರಣಗಳನ್ನು ನಡೆಸಲಾಗುತ್ತಿದ್ದು, ಇದರಲ್ಲಿ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗದ ಸದಸ್ಯರು ತಿಳಿಸಿದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಥಾಮ್ಸನ್, ಟಾಮ್ ಕೆ.ಯೇಶುದಾ, ಡಾ.ಕೆ.ಪಿ.ಗೀತಾ, ಸಿ.ಮುಹಮ್ಮದ್ ಕುಂಞÂ, ಅರುಣ್ ಕ್ರಾಸ್ತಾ, ಜಲೀಲ್ ಕಡವತ್, ಅಬೂಬಕ್ಕರ್ ಉಪ್ಪಳ, ಟಿ.ಎಂ.ಮುಹಮ್ಮದ್ ಶರೀಫ್ ಮೊದಲಾದವರು ಉಪಸ್ಥಿತರಿದ್ದರು.