ತಿರುವನಂತಪುರಂ: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸರ್ಕಾರದ ವಿರುದ್ಧ ಕಠಿಣ ನಿಲುವು ತಳೆದಿದ್ದಾರೆ. ಬಜೆಟ್ ಅಧಿವೇಶನದಲ್ಲಿ ನೀತಿ ಘೋಷಣೆ ಭಾಷಣ ಕೇವಲ ಎರಡೇ ನಿಮಿಷದಲ್ಲಿ ಮುಕ್ತಾಯವಾಯಿತು.
ಅರವತ್ಮೂರು ಪುಟಗಳ ನೀತಿ ಘೋಷಣೆಯ ಭಾಷಣದ ಕೊನೆಯ ಪ್ಯಾರಾವನ್ನು ಮಾತ್ರ ಅವರು ಇಂದು ಓದಿದರು. ರಾಜ್ಯಪಾಲರನ್ನು ಸಮಧಾನಗೊಳಿಸಲು ಮುಖ್ಯಮಂತ್ರಿ ಹಾಗೂ ಸ್ಪೀಕರ್ ಬಂದರೂ ಯಾವುದೇ ಸೂಚನೆ ಇಲ್ಲದೆ ರಾಜ್ಯಪಾಲರು ಸದನದಿಂದ ವಾಪಸಾದರು.
ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿ ಸದನದಿಂದ ನಿರ್ಗಮಿಸಿದರು. ವಿಧಾನಸಭೆ ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿರುವುದು ಇತಿಹಾಸದಲ್ಲಿ ಇದೇ ಮೊದಲು. ಸೋಮವಾರ ಮತ್ತೆ ಸಭೆ ನಡೆಯಲಿದೆ.