ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಜ.16 ರಂದು ಕಿರುಷಷ್ಠಿ ಉತ್ಸವ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6 ಕ್ಕೆ. ಗಣಪತಿ ಹವನ, 7 ಕ್ಕೆ ದೀಪ ಪ್ರತಿಷ್ಠೆ, ಉಷಃಪೂಜೆ, 8ಕ್ಕೆ ಶಬರಿಗಿರಿ ಮಹಿಳಾ ಭಜನಾ ಸಂಘ ಬದಿಯಡ್ಕ, 9.30 ಕ್ಕೆ ಶ್ರೀ ಚಾಮುಂಡೇಶ್ವರಿ ಭಜನಾ ಸಂಘ ಕಜಳ ತಂಡದವರಿಂದ ಭಜನೆ ನಡೆಯಲಿದೆ. 11 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಹೊರಾಂಗಣ ಚಪ್ಪರದ ವಿನಂತಿ ಪತ್ರ ಬಿಡುಗಡೆ ನಡೆಯಲಿದೆ. ನಿವೃತ್ತ ಮುಖ್ಯೋಪಾಧ್ಯಾಯ ಮಾನ ಮಾಸ್ತರ್ ಅಧ್ಯಕ್ಷತೆ ವಹಿಸುವರು. ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಬಿಡುಗಡೆಗೊಳಿಸುವರು. ಡಾ,ನರೇಶ್ ರೈ ದೆಪ್ಪುಣಿಗುತ್ತು, ಶ್ಯಾಮ್ ಭಟ್ ಏವುಂಜೆ ಉಪಸ್ಥಿತರಿರುವರು. ಜೊತೆಗೆ ಕುಕ್ಕಂಕೂಡ್ಲು ಶ್ರೀಕಂಠಪಾಡಿ ಶ್ರೀ ಸುಬ್ರಮಣ್ಯ ಸ್ವಾಮೀ ದೇವರ ಬಗ್ಗೆ .ಬಿ. ಉದನೇಶ್ವರ ಪ್ರಸಾದ ಮೂಲಡ್ಕ ರಚಿಸಿ, ಗಣೇಶ್ ನೀರ್ಚಾಲು ಹಾಡಿರುವ ಭಕ್ತಿಗೀತೆ ವೀಡಿಯೋ ಹಾಡು ಗಾನತರಂಗ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳಿಸಲಾಗುವುದು.
ಬಳಿಕ ರಾಗಸುಧಾ ಮೇಲೊಡೀಸ್ ತಂಡ ನೀರ್ಚಾಲು ತಂಡದವರಿಂದ ಭಕ್ತಿಗೀತೆ ಗಾಯನ ನಡೆಯಲಿದೆ. 11.30 ಕ್ಕೆ ನವಕಾಭಿಷೇಕ, 12ಕ್ಕೆ ತುಲಾಭಾರ ಸೇವೆಗಳು, 12.30 ಕ್ಕೆ ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ಮಧೂರು ಶ್ರೀ ಮಹಾಗಣಪತಿ ಭಜನಾ ಮಂಡಳಿ, 6ಕ್ಕೆ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 6.30 ಕ್ಕೆ ರಕ್ತೇಶ್ವರಿ ತಂಬಿಲ ಸೇವೆ, 7.30 ಕ್ಕೆ ಊರ ಬಾಲಕಲಾವಿದರಿಂದ ನೃತ್ಯ ವೈವಿಧ್ಯ, ರಾತ್ರಿ 8 ಕ್ಕೆ ಎಣಿಯರ್ಪು ಕೋದ0ಭರತ್ ತರವಾಡಿನಿಂದ ಶ್ರೀವಿಷ್ಣುಮೂರ್ತಿ ಭಂಡಾರ ಆಗಮನ, 8.15 ಕ್ಕೆ ತೊಡ0ಙಲ್, ರಾತ್ರಿ 9.30 ಕ್ಕೆ ರಾತ್ರಿಯ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಜ. 17 ರಂದು ಬೆಳಿಗ್ಗೆ 10.30 ಶ್ರೀ ವಿಷ್ಣುಮೂರ್ತಿ ದೈವದ ಕೋಲ ಮತ್ತು ಪ್ರಸಾದ ವಿತರಣೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಭಂಡಾರ ಎಣಿಯರ್ಪಿಗೆ ಹಿಂತುರಿಗಿ ಹೋಗುವುದರಿಂದ ಕಿರುಷಷ್ಠಿ ಉತ್ಸವ ಮುಕ್ತಾಯಗೊಳ್ಳಲಿದೆ.