ಕುಂಬಳೆ: ಹವ್ಯಕ ಸಮಾಜದ ಪ್ರಧಾನ ಆರಾಧನಾ ಕೇಂದ್ರಗಳಲ್ಲೊಂದಾದ ಕಾನ ಶ್ರೀ ಶಂಕರನಾರಾಯಣ ದೇವರ ಮಠದಲ್ಲಿ ಹೊಸ್ತಿನ ದೇವಕಾರ್ಯ ಮತ್ತು ಶ್ರೀ ಧೂಮಾವತೀ ದೈವದ ಪುದ್ವಾರು ಕೋಲ ಈಮಧೂ|(ಜನವರಿ 27 ಶನಿವಾರ) ಮತ್ತು ಜ.28 ಭಾನುವಾರ ಜರಗಲಿರುವುದು.
ಜ.26 ಶುಕ್ರವಾರ ಬೆಳಗ್ಗೆ 7 ಕ್ಕೆ ಶ್ರೀಧೂಮಾವತೀ ಸನ್ನಿಧಿಯಲ್ಲಿ ಆಚಾರ್ಯರಿಂದ ಪಂಚಗವ್ಯ ಹವನ, ಕಲಶಾಭಿಷೇಕ, 10 ಕ್ಕೆ ಶ್ರೀ ಶಂಕರನಾರಾಯಣ ದೇವರ ಸನ್ನಿಧಿಯಲ್ಲಿ ಕೊಪ್ಪರಿಗೆ ಮುಹೂರ್ತ ನಡೆಯಿತು.ಇಂದು 6.30ಕ್ಕೆ ಆಚಾರ್ಯರಿಂದ ಗಣಪತಿ ಹೋಮ, ಪಂಚಗವ್ಯ ಹೋಮ, ನವಕಾಭಿಷೇಕ, 8 ಕ್ಕೆ ಸಾಮೂಹಿಕ ರುದ್ರ ಪಾರಾಯಣ, 10.30ಕ್ಕೆ ತುಲಾಭಾರ ಸೇವೆ, 11 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂತರ್ಪಣ ನಡೆಯಲಿದೆ. ಸಂಜೆ 6.30ಕ್ಕೆ ಕಾವಿ ಸುಬ್ರಹ್ಮಣ್ಯ ಯಕ್ಷ ಬಳಗ ವರ್ಕಾಡಿ ಇವರಿಂದ ಇಂದ್ರಜಿತು ಕಾಳಗ ತಾಳಮದ್ದಳೆ, ರಾತ್ರಿ 7.30ಕ್ಕೆ ಭಂಡಾರ ಮನೆಯಿಂದ ಶ್ರೀ ಧೂಮಾವತೀ ದೈವದ ಭಂಡಾರ ಹೊರಟು ದೈವಸ್ಥಾನದಲ್ಲಿ ತಂಬಿಲ ಮುಗಿಸಿ ಶ್ರೀ ಶಂಕರನಾರಾಯಣ ದೇವರ ಮಠಕ್ಕೆ ಆಗಮನ, ದೇವರಿಗೆ ಮಹಾಪೂಜೆ, ಶ್ರೀ ಧೂಮಾವತೀ ದೈವದ ತೊಡಂಙಲ್ ನಡೆಯಲಿದೆ. ಜ.27 ಭಾನುವಾರ ಬೆಳಗ್ಗೆ 9.30ಕ್ಕೆ ಶ್ರೀ ಧೂಮಾವತೀ ದೈವದ ಕೋಲ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.