ಕಾಸರಗೋಡು: ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದ ನಿರ್ದೇಶನ ಪ್ರಕಾರ ಇವಿಎಂ-ವಿವಿ ಪ್ಯಾಟ್ ಯಂತ್ರಗಳನ್ನು ಬಳಸಿ ಮತದಾನ ಮಾಡುವುದು ಸೇರಿದಂತೆ ಮತದಾರರಲ್ಲಿ ಚುನಾವಣಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚೀಫ್ ಇಲಕ್ಟರಲ್ ಆಫೀಸರ್ ನಿರ್ದೇಶನದಂತೆ ಮೊಬೈಲ್ ಡೆಮಾನ್‍ಸ್ಟ್ರೇಷನ್ ವ್ಯಾನ್ ಜಿಲ್ಲೆಗೆ ತಲುಪಿದೆ.
ನೆಟ್ಟಣಿಗೆ ಬಜ ಮಾಡೆಲ್ ಕಾಲೇಜ್ ಆಫ್ ಆಟ್ರ್ಸ್ ಆಂಡ್ ಸಯನ್ಸ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್ ಮೊಬೈಲ್ ಡೆಮಾನ್‍ಸ್ಟ್ರೇಷನ್ ವಾಹನಕ್ಕೆ ಫ್ಲಾಗ್ ಆಫ್ ಮಾಡಿದರು. ಜಿಲ್ಲಾ ಸ್ವೀಪ್ ನೋಡಲ್ ಆಫೀಸರ್ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಇಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ಬಳಸುವ ವಿಧಾನವನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾ ವಿಭಾಗದ ನೌಕರರಾದ ಪಿ.ಧನೇಶ್, ಕೆ.ಟಿ.ಧನೇಶ್ ಉಪಸ್ಥಿತರಿದ್ದರು. ಬೆನೆಟ್ ಥಾಮಸ್ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲೆ ಕೆ.ನಿಲೀನಾ ಮುರಳಿ ಸ್ವಾಗತಿಸಿದರು. ಕಾಲೇಜು ಯೂನಿಯನ್ ಅಧ್ಯಕ್ಷ ಕೆ.ವಿ.ರಾಹುಲ್ ವಂದಿಸಿದರು. ನಂತರ ವಿದ್ಯಾರ್ಥಿಗಳ ವಿವಿಧ ಕಲಾತ್ಮಕ ಕಾರ್ಯಕ್ರಮ ನಡೆಯಿತು.