ಕೊಟ್ಟಕಲ್: ಬಿಎಎಂಎಸ್ ಕೋರ್ಸ್‍ಗೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ರ್ಯಾಂಕ್ ಹಾಗೂ ಕೊಟ್ಟಕಲ್‍ನ ವಿಪಿಎಸ್‍ವಿ ಆಯುರ್ವೇದ ಕಾಲೇಜಿನಲ್ಲಿ ಪ್ರಥಮ ಯಾರ್ಂಕ್ ಪಡೆದ ವಿದ್ಯಾರ್ಥಿಗಳಿಗೆ ಆರ್ಯವೈದ್ಯಶಾಲಾ ಶತಮಾನೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿಪಿಎಸ್‍ವಿ ಆಯುರ್ವೇದ ಕಾಲೇಜು ಕೊಟ್ಟಕಲ್‍ನ ಡಾ. ಆದ್ರ್ರಾ ಎಂ. ಪ್ರಥಮ ಸ್ಥಾನಕ್ಕೆ ಅರ್ಹರು. ತ್ರಿಶೂರ್ ವೈದ್ಯ ರತ್ನಂ ಆಯುರ್ವೇದ ಕಾಲೇಜಿನ ಡಾ. ದೃಶ್ಯ ಎಚ್. ಭಟ್ ದ್ವಿತೀಯ. ಒಂದು ಮತ್ತು ಎರಡು ಯಾರ್ಂಕ್‍ಗಳು ಕ್ರಮವಾಗಿ ರೂ 20,000 ಮತ್ತು ರೂ 15,000 ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ.
2018ರ ಬ್ಯಾಚ್‍ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೊಟ್ಟಕಲ್ ವಿಪಿಎಸ್‍ವಿ ಕಾಲೇಜಿನ ಡಾ. ಆದ್ರ್ರಾ |ಈ ಪ್ರಶಸ್ತಿಗೆ ಆಯ್ಕೆಯಾಗಿರುವರು. ಪ್ರಶಸ್ತಿಯು ರೂ 15,000 ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಮ್ಯಾನೇಜಿಂಗ್ ಟ್ರಸ್ಟಿ ಡಾ. ಪಿ.ಎಂ. ವಾರ್ಯರ್ ಪ್ರಶಸ್ತಿ ಪ್ರದಾನ ಮಾಡಲಿರುವರು.