ಇಸ್ಲಾಮಾಬಾದ್: ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜನರಲ್ ಪರ್ವೇಜ್ ಮುಷರಫ್‌ಗೆ (ಈಗ ನಿಧನರಾಗಿದ್ದಾರೆ) ದೇಶದ್ರೋಹ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
2007ರ ನ. 3ರಂದು ಸಂವಿಧಾನವನ್ನು ಅಮಾನತಿನಲ್ಲಿಟ್ಟು ತುರ್ತುಪರಿಸ್ಥಿತಿ ಹೇರಿದ್ದನ್ನು ದೇಶ ದ್ರೋಹಕ್ಕೆ ಸಮಾನ ಎಂದು ಪರಿಗಣಿಸಿದ್ದ ವಿಶೇಷ ನ್ಯಾಯಾಲಯ 2019ರಲ್ಲಿ ಮುಷರಫ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಆಗ ಅವರು ಗೈರಾಗಿದ್ದರು. ಆದರೆ 2020 ಜನವರಿಯಲ್ಲಿ ಲಾಹೋರ್ ಹೈಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿತ್ತು.
ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಮುಖ್ಯನ್ಯಾಯಮೂರ್ತಿ ಖಾಜಿ ಫೀಜಾ ಇಸಾ ಒಳಗೊಂಡಂತೆ ನಾಲ್ಕು ಸದಸ್ಯರ ಪೀಠವು ವಿಚಾರಣೆ ನಡೆಸಿ, ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ಈ ನಡುವೆ ಮುಷರಫ್ ಅವರು 2023ರ ಫೆ. 5 ನಿಧನರಾಗಿದ್ದಾರೆ.