ಮಂಜೇಶ್ವರ: ತಲೇಕಳ ಶ್ರೀ ರಾಮವಿಠ್ಠಲ ದೇಗುಲದಲ್ಲಿ ಅಯೋಧ್ಯೆಯ ರಾಮಲಲ್ಲಾನ ಪ್ರತಿಷ್ಠಾಪನೆಯ ಅಂಗವಾಗಿ ವಿಶೇಷ ಸೇವೆಗಳು ಅನುವಂಶಿಕ ಮೊಕ್ತೇಸರ ವೇದಮೂರ್ತಿ. ಯಸ್ ವಾಸುದೇವರ ನೇತೃತ್ವದಲ್ಲಿ ಜರುಗಿತು. ಶ್ರೀ ಸದಾಶಿವ ದೇವರಿಗೆ ರುದ್ರಾಭಿಷೇಕ, ಸರ್ವಾಭರಣ ಸಹಿತ ಸರ್ವಸೇವೆ ನಡೆಯಿತು. ಕ್ಷೇತ್ರದ ಅರ್ಚಕÀ ಶಿವರಾಜ ಅವರಿಂದ ಪವಮಾನ ಸೂಕ್ತ ಪಠಿಸುವುದರೊಂದಿಗೆ ರಾಮವಿಠ್ಠಲ ದೇವರಿಗೆ ಪವಮಾನಾಭಿಷೇಕ ನೆರವೇರಿಸಿದರು.
ಈ ಸಂದರ್ಭ ಊರ ಭಕ್ತವೃಂದರಿಂದ ಭಜನಾ ಸೇವೆ ಹಾಗೂ ರಾಮವಿಠ್ಠಲ ದೇವರಿಗೆ ಹಣತೆಯನ್ನು ಬೆಳಗಿಸಿ ಸಂಭ್ರಮಾಚರಣೆ ನಡೆಸಿ ಪ್ರಾರ್ಥಿಸಲಾಯಿತು. ಶ್ರೀ ಕ್ಷೇತ್ರದಲ್ಲಿ ಅಯೋಧ್ಯೆಯ ರಾಮಲಲ್ಲಾನ ಪ್ರತಿಷ್ಠಾಪನೆಯ ನೇರಪ್ರಸಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಭಂಡಾರಿ ತಲೇಕಳ ಅವರು ಶ್ರೀ ಕ್ಷೇತ್ರಾಭಿವೃದ್ಧಿಗಾಗಿ ಸಹಕರಿಸುವಂತೆ ಭಕ್ತರಲ್ಲಿ ವಿನಂತಿಸಿದರು.