ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಸ್ನಾತಕೋತ್ತರ ವಿಭಾಗಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜ. 31ರ ವರೆಗೆ ವಿಸ್ತರಿಸಲಾಗಿದ್ದು, ಠಿgಛಿueಣ.sಚಿmಚಿಡಿಣh.ಚಿಛಿ.iಟಿ ಗೆ ಭೇಟಿ ನೀಡುವ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಪ್ರವೇಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ದೇಶದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ-ಪಿಜಿ) ಮೂಲಕ ನಡೆಸಲಾಗುತ್ತದೆ. ಫೆಬ್ರವರಿ 1ರ ರಾತ್ರಿ 11.50ರ ವರೆಗೆ ಶುಲ್ಕ ಪಾವತಿಸಬಹುದಾಗಿದೆ. ಫೆಬ್ರವರಿ 2 ರಿಂದ 4 ರವರೆಗೆ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಅವಕಾಶವಿದ್ದು, ಮಾರ್ಚ್ 4 ರಂದು ಪರೀಕ್ಷಾ ಕೇಂದ್ರದ ಅಧಿಸೂಚನೆ ಲಭ್ಯವಾಗಲಿದೆ. ಮಾರ್ಚ್ 7 ರಿಂದ ಪ್ರವೇಶ ಕಾರ್ಡ್ ಡೌನ್‍ಲೋಡ್ ಮಾಡಬಹುದು. ಪರೀಕ್ಷೆಯು ಮಾರ್ಚ್ 11 ರಿಂದ 28 ರವರೆಗೆ ನಡೆಯಲಿದೆ. ವಿಶ್ವವಿದ್ಯಾಲಯದಲ್ಲಿ 26 ಪಿಜಿ ಕೋರ್ಸುಗಳಿವೆ. ಇದರಲ್ಲಿ ತಿರುವಲ್ಲಾ ಕ್ಯಾಂಪಸ್‍ನಲ್ಲಿ ಎಲ್‍ಎಲ್‍ಎಂ ಮತ್ತು ಬಾಕಿ ಉಳಿದವುಗಳು ಕಾಸರಗೋಡಿನ ಪೆರಿಯಾ ಕ್ಯಾಂಪಸ್‍ನಲ್ಲಿದೆ. ನ್ಯಾಕ್ ಶ್ರೇಯಾಂಕದಲ್ಲಿ ಎ ಗ್ರೇಡ್ ಪಡೆದಿರುವ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯವು ದೇಶದ ಉನ್ನತ ಶಿಕ್ಷಣದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ: ಎಮ್‍ಟಿಎ ವೆಬ್‍ಸೈಟ್: www.nta.ac.in ಸಹಾಯ ಕೇಂದ್ರ: 01140759000. ಇಮೇಲ್: ವಿಶ್ವವಿದ್ಯಾಲಯದ ವೆಬ್‍ಸೈಟ್: : www.cukerala.ac.in