ಕಾಸರಗೋಡು: ಮತದಾರರ ಸಂಕ್ಷಿಪ್ತ ವಿಶೇಷ ಪಟ್ಟಿ ಪರಿಷ್ಕರಣೆ 2024 ರ ಅಂಗವಾಗಿರುವ ಮತದಾರರ ಅಂತಿಮ ಪಟ್ಟಿಯನಮೀ ಹಿಂದೆ ನಿಗದಿಪಡಿಸಲಾಗಿದ್ದ 2024 ಜ. 5ರಿಂದ 2024 ಜನವರಿ 22ಕ್ಕೆ ಮುಂದೂಡಿದೆ. ಭಾರತೀಯ ಚುನಾವಣಾ ಆಯೋಗದ ಪ್ರಕಟಣೆಯನ್ವಯ ಈ ಬದಲಾವಣೆ ನಡೆಸಲಾಗಿದೆ. ಮತದಾರರ ಕರಡು ಪಟ್ಟಿಯಲ್ಲಿ ಮರಣ ಹೊಂದಿದವರು ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡವರು ಇದ್ದಲ್ಲಿ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ. ಹೊಸದಾಗಿ ಹೆಸರು ಸೇರಿಸುವವರು ಫೆÇೀರಂ 6 ಸಲ್ಲಿಸುವಾಗ ಅರ್ಜಿಯೊಂದಿಗೆ ಮತದಾರರ ಪಟ್ಟಿಯಲ್ಲಿ ಒಳಗೊಂಡಿರುವ ಕುಟುಂಬದ ಸದಸ್ಯರ ಚುನಾವಣಾ ಗುರುತಿನ ಚೀಟಿ ಅಥವಾ ಗುರುತಿನ ಚೀಟಿ ನಂಬರ್ ಸಹ ನೀಡಬೇಕು. 2024 ಜನವರಿ 1ಕ್ಕೆ 18 ವರ್ಷ ಪೂರ್ಣಗೊಂಡ ಎಲ್ಲಾ ಮತದಾರರನ್ನು ಸೇರ್ಪಡೆಗೊಳಿಸಲು ಹಾಗೂ ಈಗಾಘಲೇ ಮೃತಪಟ್ಟಿರುವ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಕೋರಿದರು.
ತಮ್ಮ ಮೊಬೈಲ್ ಫೆÇೀನ್‍ನಲ್ಲಿ ವೋಟರ್ ಹೆಲ್ಪ್ ಆ್ಯಪ್ (ವಿಎಚ್‍ಎ) ಡೌನ್‍ಲೋಡ್ ಮಾಡುವ ಮೂಲಕ ಮತದಾರರ ಪಟ್ಟಿಯನ್ನು ಪರಿಶೀಲಿಸಲು ಹಾಗೂ ತಮ್ಮ ಹೆಸರನ್ನು ಸುಲಭವಾಗಿ ಸೇರಿಸಬಹುದಾಗಿದೆ. ವೋಟರ್ ಸರ್ವೀಸ್ ಪೆÇೀರ್ಟಲ್ ಮೂಲಕ ಆನ್‍ಲೈನ್‍ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಬಿ.ಎಲ್.ಒ ಮೂಲಕವೂ ಹೆಸರು ಸೇರಿಸಬಹುದು. ಅರ್ಹರ ಹೆಸರು ಸೇರ್ಪಡೆಗೊಳಿಸಿ, ಅನರ್ಹರನ್ನು ತೆಗೆದು ಹಾಕುವ ಮೂಲಕ ತಪ್ಪುಗಳಿಲ್ಲದೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.