ನವದೆಹಲಿ: ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರ ಪುತ್ರ, ಕಾಂಗ್ರೆಸ್ ನಾಯಕ ಮನ್ವೇಂದ್ರ ಸಿಂಗ್ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಅಲ್ವಾರ್‌ನಲ್ಲಿ ಅಪಘಾತಕ್ಕೀಡಾಗಿದೆ.
ಭೀಕರ ಅಪಘಾತದಲ್ಲಿ ಮನ್ವೇಂದ್ರ ಸಿಂಗ್ ಅವರ ಪತ್ನಿ ಸಾವನ್ನಪ್ಪಿದ್ದಾರೆ. ಮಾಜಿ ಸಂಸದ ಮನ್ವೇಂದ್ರ ಸಿಂಗ್ ಮತ್ತು ಅವರ ಪುತ್ರ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನ್ವೇಂದ್ರ ಸಿಂಗ್ ಮತ್ತು ಅವರ ಕುಟುಂಬ ದೆಹಲಿಯಿಂದ ಜೈಪುರಕ್ಕೆ ತೆರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಕಾರು ಗೋಡೆಗೆ ಡಿಕ್ಕಿ ಹೊಡೆದಿದೆ.
ಮನ್ವೇಂದ್ರ ಸಿಂಗ್ ಅವರು 2004 ಮತ್ತು 2009 ರ ನಡುವೆ ಲೋಕಸಭೆಯ ಸದಸ್ಯರಾಗಿದ್ದರು ಮತ್ತು ರಾಜಸ್ಥಾನದ ಬಾರ್ಮರ್-ಜೈಸಲ್ಮೇರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.