ಮಂಜೇಶ್ವರ: ಹೊಸಂಗಡಿ ಬಳಿಯ ಕೊಪ್ಪಳ ಕಜೆಯಲ್ಲಿರುವ ನದಿಯಲ್ಲಿ ಅಪರಿಚಿತ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ. ಸುಮಾರು 35 ವರ್ಷ ಪ್ರಾಯ ಅಂದಾಜಿಸಲಾಗಿದೆ.
ಮಂಜೇಶ್ವರ: ಹೊಸಂಗಡಿ ಬಳಿಯ ಕೊಪ್ಪಳ ಕಜೆಯಲ್ಲಿರುವ ನದಿಯಲ್ಲಿ ಅಪರಿಚಿತ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ. ಸುಮಾರು 35 ವರ್ಷ ಪ್ರಾಯ ಅಂದಾಜಿಸಲಾಗಿದೆ.
ಪರಿಸರ ವಾಸಿಗಳು ಗಮನಿಸಿ ಮಂಜೇಶ್ವರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಜರು ನಡೆಸಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಈ ನದಿಯು ಪುತ್ತೂರು, ವಿಟ್ಲ ಭಾಗದಿಂದ ಹರಿದು ಆನೆಕಲ್ಲು, ಮುನ್ನಿಪ್ಪಾಡಿ, ಕೊಡಂಗೆ ವಾಮಂಜೂರು ಚೆಕ್ ಪೋಸ್ಟ್, ಕೊಪ್ಪಳ ಕಜೆ ಮೂಲಕ ಹೊಸಬೆಟ್ಟು ಸಮುದ್ರಕ್ಕೆ ಸೇರುತ್ತದೆ. ವಾರಿಸುದಾರರು ಇದ್ದಲ್ಲಿ ಮಂಜೇಶ್ವರ ಪೊಲೀಸ್ ಠಾಣೆ 8113800968, 9497980926 ಅನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.