ಕಾಸರಗೋಡು: ರಾಜ್ಯ ಬಡತನ ನಿರ್ಮೂಲನಾ ಮಿಷನ್ ಕುಟುಂಬಶ್ರೀ ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಿತ ಜೆಂಡರ್ ಹೆಲ್ಪ್ ಡೆಸ್ಕ್‍ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೌನ್ಸಿಲರ್ ಹುದ್ದೆಗೆ ಕನ್ನಡ ಬಲ್ಲ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಎಮ್.ಎಸ್.ಸಿ ಸೈಕಾಲಜಿ / ಎಮ್.ಎಸ್.ಡಬ್ಲ್ಯೂ ಅಥವಾ ಕೌನ್ಸೆಲಿಂಗ್‍ನಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಭಾಷೆಯನ್ನು ತಿಳಿದಿರಬೇಕು. ವಯಸ್ಸಿನ ಮಿತಿ ಜನವರಿ 1, 2024 ಕ್ಕೆ 40 ವರ್ಷಗಳನ್ನು ಮೀರಬಾರದು. ಅರ್ಹತೆಯಿರುವ, ಕೆಲಸದ ಅನುಭವವಿರುವ ಪ್ರಸ್ತುತ ಕುಟುಂಬಶ್ರೀಯ ಕಮ್ಯುನಿಟಿ ಕೌನ್ಸಿಲರಾಗಿ ಕಾರ್ಯನಿರ್ವಹಿಸುತ್ತಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಭ್ಯರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು. ಸರ್ಕಾರ / ಅರೆ ಸರ್ಕಾರ / ಸಾರ್ವಜನಿಕ ವಲಯದ ಸಂಸ್ಥೆಗಳು / ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಸಂಸ್ಥೆಗಳು / ಅತ್ಯುತ್ತಮ ಸಂಸ್ಥೆಗಳಲ್ಲಿ ಕೌನ್ಸಿಲರಾಗಿ ಎರಡು ವರ್ಷಗಳ ಕೆಲಸದ ಅನುಭವ ಇದ್ದವರನ್ನು ಪರಿಗಣಿಸಲಾಗುವುದು. ತಿಂಗಳಿಗೆ 30,000 ರೂ, ವೇತನ ನೀಡಲಾಗುವುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅರ್ಜಿಯನ್ನು ಕುಟುಂಬಶ್ರೀ ಜಿಲ್ಲಾ ಮಿಷನ್ ಕಚೇರಿಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಬಯೋಡೇಟಾ, ಶೈಕ್ಷಣಿಕ ಅರ್ಹತೆ, ವಯಸ್ಸು, ಕೆಲಸದ ಅನುಭವ ಸಾಬೀತುಪಡಿಸುವ ಸರ್ಟಿಫಿಕೇಟ್, ಪೋಟೋ ಇರುವ ವಿಳಾಸ ದಾಖಲೆ, ಎಂಬಿವುಗಳ ಸ್ವಯಂ ದೃಢೀಕರಿಸಿದ ಪ್ರತಿಗಳು ಇರಬೇಕು. ಭಾಗಶಃ ಭರ್ತಿ ಮಾಡಿದ ಮತ್ತು ಅಸ್ಪಷ್ಟವಾಗಿ ಭರ್ತಿ ಮಾಡಿದ ಅರ್ಜಿಯನ್ನು ತಿರಸ್ಕರಿಸಲಾಗುವುದು. ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ ಜನವರಿ 25 ರಂದು ಸಂಜೆ 5 ಗಂಟೆಯವರೆಗೆ. ವಿಳಾಸ ಜಿಲ್ಲಾ ಮಿಷನ್ ಕೋರ್ಡಿನೇಟರ್, ಸಿವಿಲ್ ಸ್ಟೇಷನ್, ವಿದ್ಯಾನಗರ ಪಿ.ಒ., ಕಾಸರಗೋಡು, ಪಿನ್ - 671123. ದೂರವಾಣಿ ಸಂಖ್ಯೆ 04994 256111, 9656887301.ಕಳಿಸಬೇಕು.