ಅಮೃತಸರ: ಪಂಜಾಬ್‌ನ ಅಮೃತಸರದ ರೋರನ್‌ವಾಲಾ ಖುರ್ದ್ ಗ್ರಾಮದ ಹೊಲದಲ್ಲಿ ಗಡಿ ಭದ್ರತಾ ಪಡೆ ಶುಕ್ರವಾರ ಚೀನಾ ನಿರ್ಮಿತ ಡ್ರೋನ್ ಅನ್ನು ವಶಪಡಿಸಿಕೊಂಡಿದೆ ಎಂದು ಬಿಎಸ್‌ಎಫ್ ಅಧಿಕೃತ ಪ್ರಕಟಣೆ ತಿಳಿಸಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಬಿಎಸ್‌ಎಫ್ ಪಡೆಗಳ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಡ್ರೋನ್ ಅನ್ನು ವಶಕ್ಕೆ ಪಡೆಯಲಾಗಿದೆ.
"ಜನವರಿ 26, 2024 ರಂದು, ಬೆಳಗಿನ ಸಮಯದಲ್ಲಿ, ಗಡಿ ಬೇಲಿಯ ಸಮೀಪ ಗಸ್ತು ತಿರುಗುತ್ತಿದ್ದಾಗ, ಬಿಎಸ್ಎಫ್ ಪಡೆಗಳು ಅನುಮಾನಾಸ್ಪದ ವಸ್ತುವನ್ನು ಗಮನಿಸಿದವು" ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
"ಸಮೀಪ ಹೋಗಿ ಅನುಮಾನಾಸ್ಪದ ವಸ್ತುವನ್ನು ಪರಿಶೀಲಿಸಿದಾಗ ಅದು ಚೀನಾ ನಿರ್ಮಿತ ಸಣ್ಣ ಡ್ರೋನ್ ಎಂದು ತಿಳಿದುಬಂದಿದೆ. ಬಿಎಸ್ಎಫ್ ಪಡೆಗಳು ಅದನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿ" ಎಂದು ಪ್ರಕಟಣೆ ತಿಳಿಸಿದೆ.