ತಿರುವನಂತಪುರಂ: ವೋಟ್ ಬ್ಯಾಂಕ್ ಗುರಿಯಾಗಿಟ್ಟುಕೊಂಡು ಪೊನ್ನಾನಿಯಲ್ಲಿ ಪ್ರಧಾನ ಕಛೇರಿಯೊಂದಿಗೆ ಧಾರ್ಮಿಕ ಅಧ್ಯಯನ ಕೇಂದ್ರ ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.
ಶೇಖ್ ಜೈನುದ್ದೀನ್ ಮಖ್ದೂಮ್ ಅವರ ಹೆಸರಿನಲ್ಲಿ ಅರೇಬಿಕ್ ಭಾಷೆ ಮತ್ತು ಸಾಂಸ್ಕøತಿಕ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವೆ ಆರ್ ಬಿಂದು ತಿಳಿಸಿದ್ದಾರೆ. ಕೇರಳ ವಿಶ್ವವಿದ್ಯಾನಿಲಯ ಅರೇಬಿಕ್ ವಿಭಾಗ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇತಿಹಾಸಕಾರ, ವಿದ್ವಾಂಸ ಮತ್ತು ಸೂಫಿ ಶೇಖ್ ಜೈನುದ್ದೀನ್ ಮಖ್ದೂಮ್ ಅವರನ್ನು ಮಾನಿಸಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಮದರು. ಇತರೆ ಸ್ಥಳೀಯ ಭಾಷೆಗಳ ಪ್ರಚಾರಕ್ಕೆ ಹಿಂದೇಟು ಹಾಕುತ್ತಿರುವ ಸರ್ಕಾರ ಅರೇಬಿಕ್ ಭಾಷಾ ಕಲಿಕಾ ಕೇಂದ್ರಕ್ಕೆ ಸಾಕಷ್ಟು ನೆರವು ನೀಡುತ್ತಿದೆ.