HEALTH TIPS

ಪಶ್ಚಿಮ ಬಂಗಾಳದಲ್ಲಿ ED ಅಧಿಕಾರಿಗಳಿಗೆ ಥಳಿತ: ತನಿಖೆ ನಡೆಸಲು ರಾಜ್ಯಪಾಲರ ಸೂಚನೆ

             ಕೋಲ್ಕತ್ತ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲೆ ಪಶ್ಚಿಮ ಬಂಗಾಳದಲ್ಲಿ ನಡೆದ ದಾಳಿ ಪ್ರಕರಣದ ಪ್ರಮುಖ ಆರೋಪಿ, ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ಅವರನ್ನು ಕೂಡಲೇ ಬಂಧಿಸುವಂತೆ ರಾಜ್ಯದ ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

              ' ಶಹಜಹಾನ್‌ ಅವರು ರಾಜ್ಯದ ಗಡಿ ದಾಟಿ ಬೇರೆಡೆ ತೆರಳಿರಬಹುದು, ಅವರಿಗೆ ಉಗ್ರರ ಜೊತೆ ಸಂಪರ್ಕವಿರಬಹುದು. ಈ ಕುರಿತು ಕೂಡಲೇ ತನಿಖೆ ನಡೆಸಬೇಕು' ಎಂದು ರಾಜ್ಯಪಾಲರು ಹೇಳಿದ್ದಾರೆ ಎಂದು ರಾಜಭವನ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

             ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿ ದಾಳಿ ನಡೆಸಲು ಇ.ಡಿ ಅಧಿಕಾರಿಗಳು ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಗೆ ಶುಕ್ರವಾರ ಬಂದಿದ್ದರು. ಅವರ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಘಟನೆಯಲ್ಲಿ ಮೂವರು ಅಧಿಕಾರಿಗಳು ಗಾಯಗೊಂಡಿದ್ದರು.

               ಈ ಘಟನೆ ಕುರಿತು ರಾಜಭವನದ 'ಶಾಂತಿ ಕಕ್ಷಾ'ದಲ್ಲಿ ದೂರು ದಾಖಲಾಗಿದೆ. ಶಹಜಹಾನ್‌ ಶೇಖ್‌ಗೆ ಕೆಲವು ರಾಜಕೀಯ ನಾಯಕರ ಬೆಂಬಲ ಇದೆ. ಕೆಲವು ಪೊಲೀಸ್‌ ಅಧಿಕಾರಿಗಳೂ ಅವರ ಹಿಂದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

            ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು, 'ಶಹಜಹಾನ್‌ ಅವರನ್ನು ಕೂಡಲೇ ಬಂಧಿಸಿ. ಅವರು ತಂಗಿರುವ ಸ್ಥಳದ ಕುರಿತು ಮಾಹಿತಿ ಕಲೆಹಾಕಿ. ಆದೇಶ ಪಾಲನೆ ಕುರಿತು ವರದಿ ನೀಡಿ' ಎಂದು ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

              ಟಿಎಂಸಿ ತಿರುಗೇಟು: ರಾಜ್ಯಪಾಲರ ಹೇಳಿಕೆಯನ್ನು ಟಿಎಂಸಿ ತೀವ್ರವಾಗಿ ವಿರೋಧಿಸಿದೆ. 'ಯಾವ ಆಧಾರದಲ್ಲಿ ರಾಜ್ಯಪಾಲರು ಇಂಥ ಹೇಳಿಕೆ ನೀಡಿದ್ದಾರೆ ಎಂದು ನಮಗೆ ತಿಳಿದಿಲ್ಲ. ಸಂವಿಧಾನದ ಪ್ರಕಾರ ರಾಜ್ಯಪಾಲರು ರಾಜ್ಯ ಸರ್ಕಾರದ ಜೊತೆಗೂಡಿ ಕೆಲಸ ಮಾಡಬೇಕು. ಯಾವುದೇ ಬಲವಾದ ಸಾಕ್ಷ್ಯ ಅಥವಾ ವರದಿಯಿಲ್ಲದೇ ಈ ರೀತಿ ಹೇಳಿಕೆ ನೀಡಲು ಹೇಗೆ ಸಾಧ್ಯ. ಅವರು ಇಲ್ಲಿ ಇರುವುದು ಸಮಾನಾಂತರ ಸರ್ಕಾರ ನಡೆಸಲು ಅಲ್ಲ' ಎಂದು ಟಿಎಂಸಿ ವಕ್ತಾರ ಕುನಾಲ್‌ ಘೋಷ್‌ ಅವರು ಹೇಳಿದ್ದಾರೆ.

              ಬಿಜೆಪಿ ಆರೋಪ: ಇದೇವೇಳೆ, ಇ.ಡಿ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣದಲ್ಲಿ ಗಡಿಯಾಚೆಗಿನ ಉಗ್ರರು ಮತ್ತು ರೊಹಿಂಗ್ಯಾ ಸಮುದಾಯದ ಕೈವಾಡವಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಆರೋಪಿಸಿದೆ.

             ಪರಸ್ಪರ ದೂರು: ದಾಳಿ ಪ್ರಕರಣದ ಕುರಿತು ರಾಜಕೀಯ ಕೆಸರೆರಚಾಟ ನಡೆಯುತ್ತಿರುವ ಬೆನ್ನಲ್ಲೇ, ಶಹಜಾನ್‌ ಅವರ ಕುಟುಂಬ ಮತ್ತು ಇ.ಡಿ ಪರಸ್ಪರರ ವಿರುದ್ಧ ಶನಿವಾರ ದೂರು ದಾಖಲಿಸಿವೆ. ಶಹಜಹಾನ್‌ ದೇಶದಿಂದ ಪರಾರಿಯಾಗುವ ಸಾಧ್ಯತೆ ಇರುವ ಕಾರಣ ಅವರಿಗೆ ಇ.ಡಿ ಲುಕ್‌ಔಟ್‌ ನೋಟಿಸ್‌ ನೀಡಿದೆ.

               ಪೊಲೀಸರು ಕೂಡಾ ಸ್ವಯಂ ಪ್ರೇರಿತವಾಗಿ ಇ.ಡಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಅವರ ವಿರುದ್ಧ ಕಿರುಕುಳ, ಒತ್ತಾಯದ ಪ್ರವೇಶ ಮತ್ತು ಕಳವು ಆರೋಪ ಹೊರಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries