ತಿರುವನಂತಪುರಂ: ಮುಖ್ಯಮಂತ್ರಿ ಪುತ್ರಿ ವೀಣಾ ವಿಜಯನ್ ಒಡೆತನದ ಎಕ್ಸಾಲಾಜಿಕ್ ಮತ್ತು ಸಿಮೆಂಟ್ ಕಂಪನಿ ಸಿಎಂಆರ್‍ಎಲ್ ನಡುವಿನ ನಿಗೂಢ ಡೀಲ್‍ನಲ್ಲಿ ಸಿಪಿಎಂನ ಸಮರ್ಥನೆ ಪೊಳ್ಳುಗೊಳ್ಳುತ್ತಿದೆ.
ನಿಗೂಢ ಒಪ್ಪಂದದ ಬಗ್ಗೆ ಎರ್ನಾಕುಳಂ ಆರ್ ಒ ಸಿ ವರದಿ. ಎಕ್ಸಾಲಾಜಿಕ್ ವೀಣಾ ವಿಜಯನ್ ಅವರ ಶೆಲ್ ಕಂಪನಿಯೇ ಎಂಬುದನ್ನು ಪರಿಶೀಲಿಸಬೇಕು. ಆರ್ ಒ ಸಿ ಯ ಪ್ರಶ್ನೆಗಳಿಗೆ ಸಿಎಂಆರ್‍ಎಲ್ ನ ಉತ್ತರಗಳು ಅಸ್ಪಷ್ಟವಾಗಿವೆ ಎಂದು ವರದಿಯು ಗಮನಸೆಳೆದಿದೆ.
ಎರಡು ಕಂಪನಿಗಳ ನಡುವಿನ ವಹಿವಾಟಿನ ವಿವರವಾದ ಪರೀಕ್ಷೆಯ ಅಗತ್ಯವಿದೆ. ಕೆಎಸ್‍ಐಡಿಸಿಯ ಲೆಕ್ಕಪತ್ರಗಳನ್ನು ಪರಿಶೀಲಿಸಬೇಕು ಎಂದೂ ವರದಿ ಹೇಳಿದೆ.
ಇದೀಗ ಹೊರಬಿದ್ದಿರುವ ವರದಿಯು ಬೆಂಗಳೂರು ಆರ್‍ಒಸಿ ವರದಿಯನ್ನು ದೃಢಪಡಿಸುತ್ತದೆ. ವೀಣಾ ವಿಜಯನ್ ಅವರ ಖಾತೆಗೆ ಸಿಎಂಆರ್‍ಎಲ್‍ನಿಂದ 55 ಲಕ್ಷ ರೂ.ಸಂದಾಯವಾಗಿದೆ. ಆದರೆ ಹಣದ ಬಗ್ಗೆ ವೀಣಾ ನೀಡಿದ ವಿವರಣೆ ತೃಪ್ತಿಕರವಾಗಿಲ್ಲ ಎಂದು ಬೆಂಗಳೂರು ಆರ್‍ಒಸಿ ಪತ್ತೆ ಮಾಡಿದೆ. ಆದರೆ ಆರ್‍ಒಸಿಯ ಪ್ರಶ್ನೆಗಳಲ್ಲಿ ಸ್ಪಷ್ಟತೆ ಇಲ್ಲ ಎಂಬುದು ವೀಣಾ ಅವರ ಉತ್ತರವಾಗಿತ್ತು.