ಫ್ಲಿಪ್ಕಾರ್ಟ್‌ನ ಅಂತರ್ಜಾಲ ತಾಣವೆಂದು ಸೋಗುಹಾಕುವ ನಕಲಿ ಅಂತರ್ಜಾಲ ತಾಣದಲ್ಲಿ ಖರೀದಿಸುವುದರಿಂದ ನೀವು ನಿಮ್ಮ ಹಣವನ್ನು ಕಳೆದುಕೊಳ್ಳಬಹುದು. ಇದು ಫ್ಲಿಪ್ಕಾರ್ಟ್‌ನ ನಕಲಿ ಅಂತರ್ಜಾಲ ತಾಣ ಅಥವಾ ಆಪ್ ಆಗಿದೆ.
ಗ್ರಾಹಕರೇ ಸರಿಯಾದ ಮುನ್ನೆಚ್ಚರಿಕೆಯಿಂದ ನೀವು ಸೈಬರ್ ಮೋಸವನ್ನು ತಡೆಗಟ್ಟಬಹುದು. ಇಲ್ಲದಿದ್ದರೆ ಮೋಸ ಹೋಗುತ್ತೀರೀ. ಉದಾಹರಣೆಗೆ ಈ ಲಿಂಕ್ ಕ್ಲಿಕ್ ಮಾಡಿದರೆ ನಿಮಗೆ ಫ್ಲಿಪ್ಕಾರ್ಟ್ ರೀತಿ ಎಲ್ಲಾ ರೀತಿಯ ರಿಯಾಯಿತಿಗಳು ಕಾಣ ಸಿಗುತ್ತದೆ. ಜೊತೆ ಈ ರಿಯಾಯಿತಿ ಸಮಯ ಇನ್ನು ಕೆಲ ನಿಮಿಷಗಳು ಎಂದು ತೋರಿಸುತ್ತದೆ. ಆಗ ನೀವು ಒಂದು ಉತ್ಪನ್ನವನ್ನು ಖರೀದಿಸಲು ಕ್ಲಿಕ್ ಮಾಡಿದರೆ ಅದು ಡೆಲಿವರಿ ವಿಳಾಸ ನಮೂದಿಸುವಂತೆ ಸೂಚಿಸುತ್ತದೆ. ಅದು ಹೇಳಿದಂತೆ ನೀವು ಮಾಡುತ್ತಾ ಹೋದರೆ ಆಗ ಅದು ಯುಪಿಎ ಪೇಮೆಂಟ್ ಮಾದರಿಯನ್ನು ತೋರಿಸುತ್ತದೆ. ಅಲ್ಲಿ ನಿಮಗೆ ಪೇಮೆಂಟ್ ಆನ್ ಡೆಲಿವರಿ ಆಯ್ಕೆ ಇರುವುದಿಲ್ಲ. ಒಮ್ಮೆ ನೀವು ಯುಪಿಎ ಮೂಲಕ ಹಣ ವರ್ಗಾಹಿಸಿದರೆ ಅದು ಓರ್ವ ವ್ಯಕ್ತಿಯ ಹೆಸರಿಗೆ ಸಂದಾಯವಾಗುತ್ತದೆ. ಜೊತೆ ನೀವು ಆರ್ಡರ್ ಬುಕ್ ಮಾಡಿದಂತೆ ತೋರಿಸುತ್ತದೆ. ಇನ್ನೊಮ್ಮೆ ನೀವು ಅದೇ ಆ್ಯಪ್ ನಲ್ಲಿ ಡೆಲಿವರಿ ಆರ್ಡರ್ ಹುಡುಕಿದರೆ ನಿಮಗೆ ಸಿಗುವುದಿಲ್ಲ. ಹೀಗಾಗಿ ಯುಪಿಎ ಮೂಲಕ ಹಣ ವರ್ಗಾವಹಿಸುವ ಮೂಲಕ ಒಂದು ಬಾರಿಯಾದರೂ ಯೋಚಿಸಿ.
ಒಂದು ಮೋಸದ ಅಂತರ್ಜಾಲ ತಾಣ ಅಥವ ಆಪ್‌ನ್ನು ಗುರುತಿಸುವ ಸರಳವಾದ ಮಾರ್ಗಗಳು ಹೀಗಿದೆ!
ಈ ಆ್ಯಪ್ ನೋಡಲು ಫ್ಲಿಪ್ಕಾರ್ಟ್‌ನ ಹಾಗೇ ಇರುತ್ತದೆ. ಆದರೆ ಡೊಮೈನ್‌ನ ಹೆಸರು ತಪ್ಪಾಗಿರುತ್ತದೆ!
ಒಂದು ನಕಲಿ ಜಾಲತಾಣವನ್ನು ಸೃಷ್ಟಿಸುವಾಗ ಸೈಬರ್ ಅಪರಾಧಿಗಳು ಅದು ಫ್ಲಿಪ್ಕಾರ್ಟ್‌ನ ಜಾಲತಾಣದಂತೆಯೇ ನಿಖರವಾಗಿ ಕಾಣಿಸುವಂತೆ ಮಾಡುತ್ತಾರೆ. ನೀವು ಆ ನಕಲಿ ಜಾಲತಾಣದಲ್ಲಿ ದ ಬಿಗ್ ಬಿಲಿಯನ್ ಡೇಸ್‌ನ ಲಾಂಛನದಂತಹ ಫ್ಲಿಪ್ಕಾರ್ಟ್‌ನ ಲಾಂಛನ ಮತ್ತು ಅಧಿಕೃತ ಕಲಾಕೃತಿ ಹಾಗು ವ್ಯಾಪಾರ ಮುದ್ರೆಗಳನ್ನು ನೋಡಬಹುದು. ಅಂತಹ ಸಂದರ್ಭಗಳಲ್ಲಿ ನೀವು ಎರಡು ಕೆಲಸಮಾಡಬೇಕು.
ಈ ಆ್ಯಪ್ ಅನ್ನು ಫೋಟೊಶಾಪ್‌ನಿಂದ ತಿರುಚಲಾಗಿರುತ್ತದೆ. ಉದಾಹರಣೆಗೆ, ಮಾರಾಟದ ದಿನಗಳು ತಪ್ಪಾಗಿರುತ್ತದೆ. ಅಕ್ಷರ ಬೇರೆ ಶೈಲಿಯಿರುತ್ತದೆ. 'ಲೈಟ್' ಎಂಬಂತಹ ಹೆಚ್ಚಿನ ಪದ ಇರುತ್ತದೆ. ಅಥವಾ ಛಾಯೆಗಳನ್ನು ಚಿತ್ತುಮಾಡಿರುವುದು ನಿಮ್ಮ ಗಮನಕ್ಕೆ ಬರುತ್ತದೆ.
ಯುಆರ್‌ಎಲ್ ಅನ್ನು ಪರಿಶೀಲಿಸಿ, ಫ್ಲಿಪ್ಕಾರ್ಟ್.ಕಾಂ ಎಂಬ ಡೊಮೈನ್‌ಗೆ ಫ್ಲಿಪ್ಕಾರ್ಟ್ ಮಾತ್ರ ಒಡೆತನ ಪಡೆದಿದೆ. ಫ್ಲಿಪ್ಕಾರ್ಟ್‌ನಂತೆ ಕಾಣುವ ನಕಲಿ ವಿದ್ಯುನ್ಮಾನ ವಾಣಿಜ್ಯ ತಾಣಗಳು ಸದೃಶವಾದ ಯುಆರ್‌ಎಲ್‌ಗಳನ್ನು ಬಳಸಬಹುದು. ಉದಾಹರಣೆಗೆ Flipkart.dhamaka-offers.com/ Flipkart-bigbillion-sale.com/ http://flipkart.hikhop.com/ ಆಗಿರಬಹುದು.
ಆಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿ ನೀಡಿ ವಂಚಿಸುತ್ತಾರೆ
ಗ್ರಾಹಕರನ್ನು ಆಕರ್ಷಿಸಲು ಒಂದು ನಕಲಿ ಜಾಲತಾಣವು ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿರೆ ಅದು ಮುಂದಿನ ಆಯ್ಕೆಗಳನ್ನು ನೀಡುತ್ತಾ ಹೋಗುತ್ತದೆ. ಈ ಅಸಂಬದ್ಧ ಬೆಲೆಗಳು ಹಾಸ್ಯಾಸ್ಪದ ಮಾತ್ರವಲ್ಲ, ಅವು ಅನೈತಿಕ ಮತ್ತು ಕಾನೂನುಬಾಹಿರ ಕೂಡ. ಅಂತಹ ಕೊಡುಗೆಗಳಿಂದ ಮತ್ತು ಜಾಲತಾಣಗಳಿಂದ ದೂರವಿರಿ.