HEALTH TIPS

ವಿದೇಶಗಳಲ್ಲೂ ಭಾರತೀಯರಿಗೆ Google Pay ಸೇವೆ: NPCI ಜೊತೆ ಮಹತ್ವದ ಒಪ್ಪಂದ

              ವದೆಹಲಿ: ವಿದೇಶಗಳಲ್ಲಿ ಭಾರತೀಯರಿಗೆ ಹಾಗೂ ಭಾರತೀಯ ಪ್ರವಾಸಿಗರಿಗೆ/ಪ್ರಯಾಣಿಕರಿಗೆ ಡಿಜಿಟಲ್ ಪಾವತಿಗೆ ಅನುಕೂಲ ಕಲ್ಪಿಸಲು National Payments Corporation of Indiaದ 'NIPL' ಜೊತೆ ಗೂಗಲ್ ಪೇ ಒಪ್ಪಂದ ಮಾಡಿಕೊಂಡಿದೆ.

              'ಈ ಕುರಿತು NPCI ಜೊತೆ ಈಚೆಗೆ ತಿಳಿವಳಿಕೆ ಪತ್ರಕ್ಕೆ (MoU) ಸಹಿ ಹಾಕಲಾಗಿದೆ.

ಈ ಒಪ್ಪಂದ ಪ್ರಮುಖವಾಗಿ ಮೂರು ಉದ್ದೇಶಗಳನ್ನು ಹೊಂದಿದೆ' ಎಂದು ಗೂಗಲ್ ಇಂಡಿಯಾ ಡಿಜಿಟಲ್ ಸರ್ವಿಸಸ್ ಬುಧವಾರ ತಿಳಿಸಿದೆ.

              ಮೊದಲನೆಯದಾಗಿ, ಹೊರದೇಶಗಳಿಗೆ ಪ್ರಯಾಣಿಸುವ ಭಾರತೀಯರಿಗೆ UPI ಸೇವೆಗಳನ್ನು ವ್ಯಾಪಕವಾಗಿ ಒದಗಿಸುವುದು, ಎರಡನೇಯದಾಗಿ ವಿವಿಧ ದೇಶಗಳಲ್ಲಿಯೂ ಯುಪಿಐ ಬಳಕೆ ಹಾಗೂ ವಹಿವಾಟು ವಿಸ್ತರಿಸುವುದು ಹಾಗೂ ಮೂರನೇಯದಾಗಿ ಗಡಿಯಾಚೆಗಿನ ಹಣಕಾಸು ವಿನಿಮಯಗಳನ್ನು ಸರಳೀಕರಣಗೊಳಿಸುವುದನ್ನು ಹೊಂದಿದೆ.

                'ಈ ಪಾಲುದಾರಿಕೆಯು, ಭಾರತೀಯ ಪ್ರಯಾಣಿಕರಿಗೆ ವಿದೇಶಿ ವಹಿವಾಟುಗಳನ್ನು ಸರಳಗೊಳಿಸುವುದಲ್ಲದೆ, ಯಶಸ್ವಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುವ ನಮ್ಮ ಜ್ಞಾನ ಮತ್ತು ಪರಿಣತಿಯನ್ನು ಇತರ ದೇಶಗಳಿಗೂ ವಿಸ್ತರಿಸಲು ಅನುವು ಮಾಡಿಕೊಡುತ್ತದೆ' ಎಂದು NIPL ನ ಸಿಇಒ ರಿತೇಶ್ ಶುಕ್ಲಾ ಹೇಳಿದ್ದಾರೆ.

             ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಪೇ ಇಂಡಿಯಾದ ಸಹಭಾಗಿತ್ವದ ನಿರ್ದೇಶಕಿ ದೀಕ್ಷಾ ಕೌಶಲ್ ಅವರು, 'ಯುಪಿಐ ಆಧಾರಿತ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಗತ್ತಿನ ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಇದನ್ನು ವಿಸ್ತರಿಸಲು ನಾವು NIPL ಜೊತೆಗೆ ಒಪ್ಪಂದ ಮಾಡಿಕೊಂಡಿರುವುದು ನಮ್ಮನ್ನು ಇನ್ನಷ್ಟು ಉತ್ಸುಕರನ್ನಾಗಿ ಮಾಡಿದೆ' ಎಂದು ಹೇಳಿದ್ದಾರೆ.

                NIPL ಎಂಬುದು NPCIನಒಂದು ಅಂಗಸಂಸ್ಥೆಯಾಗಿದ್ದು, ಇದು ಹೊರದೇಶಗಳಲ್ಲಿ ಭಾರತಕ್ಕೆ ಸಂಬಂಧಿಸಿದ ಡಿಜಿಟಲ್ ಪೇಮೆಂಟ್‌ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries