ವೇಗವಾಗಿ ಬೆಳೆಯುತ್ತಿರುವ ಇಂದಿನ ಪ್ರಪಂಚ ವಿದ್ಯಮಾನಗಳಲ್ಲಿ ಹಲವು ಅತ್ಯಗತ್ಯ ವಿಷಯಗಳು ಜನಸಾಮಾನ್ಯರಿಗೆ ಬೆಂಬಲವಾಗಿರುತ್ತವೆ. ತಂತ್ರಜ್ಞಾನ ಎಂಬುದು ನಿತ್ಯ ನಿರಂತರ ಹೊಸತನಗಳೊಂದಿಗೆ ನಾಗಾಲೋಟದಲ್ಲಿದ್ದು, ನಾವು ಅದರ ವೇಗದೊಂದಿಗೆ ಹೆಜ್ಜೆ ಹಾಕುವುದು ನಿಧಾನವಾದರೆ ಬಹಳಷ್ಟು ಹಿಂದುಳಿಯುವಿಕೆ ನಮ್ಮನ್ನು ಬಾಧಿಸದಿರದು. ಕಾಲಾಕಾಲಕ್ಕೆ ಬದಲಾಗುವ ಈ ವೈಶಿಷ್ಟ್ಯಗಳ ಬಗ್ಗೆ ತಿಳುವಳಿಕೆ ಇದ್ದಲ್ಲಿ ಇಂದಿನ ಬದುಕು ಒಂದಷ್ಟು ಹಗುರವಾಗುತ್ತದೆ. ಈ ನಿಟ್ಟಿನಲ್ಲಿ ಎಂ.ಆಧಾರ್ ಎಂಬುದೂ ಮಹತ್ವಿಕೆಯ ಅರಿವಿನ ವಿಚಾರವೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮೂಲಕ ಅಧಿಕೃತ ಬಿಡುಗಡೆಯಾಗಿರುವ ಮೊಬೈಲ್ ಅಪ್ಲಿಕೇಶನ್ ಈ mAadhaar ಭಾರತೀಯ ನಿವಾಸಿಗಳಿಗಾಗಿ ನೀಡಲಾಗಿದೆ. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಆಪಲ್ ಡಿವೈಸ್‌ಗಳಿಗೆ ಲಭ್ಯವಿರುತ್ತದೆ. ಈ ಅಪ್ಲಿಕೇಶನ್ ಬಳಕೆದಾರರಿಗೆ ಆಧಾರ್ ಕಾರ್ಡ್ ವಿವರಗಳನ್ನು ನಿರ್ವಹಿಸಲು, ಆಫ್‌ಲೈನ್ ಮೋಡ್‌ನಲ್ಲಿ ಆಧಾರ್ ವಿವರಗಳನ್ನು ವೀಕ್ಷಿಸಲು, eKYC ಅಥವಾ QR ಕೋಡ್‌ಗಳನ್ನು ಹಂಚಿಕೊಳ್ಳಲು ಇದನ್ನು ಬಳಸಬಹುದು. mAadhaar ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲು ಪ್ರೊಫೈಲ್ ರಚಿಸಿ ಇದರ ಪ್ರಯೋಜನಗಳು, ವೈಶಿಷ್ಟ್ಯಗಳು ಮತ್ತು ಇತರ ವಿವರಗಳನ್ನು ಪರಿಶೀಲಿಸಿ.
mAadhaar ಅಪ್ಲಿಕೇಶನ್ ಅಂದ್ರೆ ಏನು?
ಈ mAadhaar ಅಪ್ಲಿಕೇಶನ್ ಭಾರತೀಯ ನಿವಾಸಿಗಳಿಗಾಗಿ UIDAI ಬಿಡುಗಡೆ ಮಾಡಿದ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ. ವಿವಿಧ ಸೇವೆಗಳಿಗಾಗಿ ಮಾಹಿತಿ, ವಿಳಾಸ ಮತ್ತು ಕ್ಯೂಆರ್ ಕೋಡ್‌ಗೆ ಸುಲಭ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ. ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಸೇರಿಸುವ ಮೂಲಕ ‘ಪ್ರೊಫೈಲ್ ಸೇರಿಸಿ’ ವಿಭಾಗದ ಅಡಿಯಲ್ಲಿ ಇದನ್ನು ಮಾಡಬಹುದು. mAadhaar ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ ಬಳಕೆದಾರರು ತಮ್ಮ ವೈಯಕ್ತಿಕ ವಿವರಗಳನ್ನು ಒಂದೇ ಸ್ಥಳದಲ್ಲಿ ಅಪ್ಡೇಟ್ ಮಾಡಲು ಕುಟುಂಬ ಸದಸ್ಯರ ಪ್ರೊಫೈಲ್‌ಗಳನ್ನು ಸಹ ಸೇರಿಸಬಹುದು.
ಎಂ-ಆಧಾರ್ ಪ್ರೊಫೈಲ್ ಕ್ರಿಯೇಟ್ ಮಾಡುವುದು ಹೇಗೆ?
➥ಮೊದಲಿಗೆ ನೀವು ಫೋನಲ್ಲಿ mAadhaar ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಡ್ಯಾಶ್‌ಬೋರ್ಡ್‌ನ ಮೇಲ್ಭಾಗದಲ್ಲಿ ‘ಆಧಾರ್ ನೋಂದಣಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
➥ನಂತರ ‘ರಿಜಿಸ್ಟರ್ ಆಧಾರ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ನಾಲ್ಕು ಅಂಕಿಗಳ ಯಾವುದಾದರು ಪಿನ್ ಅನ್ನು ರಚಿಸಿಕೊಳ್ಳಿ
➥ನಿಮ್ಮ ಪ್ರೊಫೈಲ್ ಅನ್ನು ಪ್ರವೇಶಿಸಲು ಪಿನ್ ಅಥವಾ ಪಾಸ್‌ವರ್ಡ್ ರಚಿಸಿ ಅಗತ್ಯವಿರುವ ಆಧಾರ್ ವಿವರಗಳನ್ನು ನಮೂದಿಸಿ.
➥ಇದರ ನಂತರ ಅಲ್ಲಿರುವ ಕ್ಯಾಪ್ಚಾವನ್ನು ಹಾಕಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
➥ಈಗ OTP ಅನ್ನು ನಮೂದಿಸಿ ಮತ್ತು ಸಲ್ಲಿಸು ಆಯ್ಕೆಯನ್ನು ಒತ್ತಿರಿ. ಈಗ ನಿಮ್ಮ ಪ್ರೊಫೈಲ್ ಅನ್ನು mAadhaar ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲಾಗುತ್ತದೆ.
➥ನೀವು ‘ಪ್ರೊಫೈಲ್ ಸೇರಿಸಿ’ ಆಯ್ಕೆಯನ್ನು ಬಳಸಿಕೊಂಡು ನಿಮ್ಮ ಕುಟುಂಬದ ಸದಸ್ಯರಿಗೆ ಪ್ರೊಫೈಲ್‌ಗಳನ್ನು ಸಹ ರಚಿಸಬಹುದು ಅಷ್ಟೇ.
➥ಪ್ರತಿ ಬಾರಿ ನೀವು ನಿಮ್ಮ mAadhaar ಪ್ರೊಫೈಲ್ ಅನ್ನು ಪ್ರವೇಶಿಸಲು ಬಯಸಿದಾಗ ನೀವು ಮೊದಲು ರಚಿಸಿದ 4 ಅಂಕಿಗಳ ಪಿನ್/ಪಾಸ್‌ವರ್ಡ್ ಅನ್ನು ಒದಗಿಸಬೇಕಾಗುತ್ತದೆ.