HEALTH TIPS

ಅಯೋಧ್ಯೆ: PM ಉಜ್ವಲ ಯೋಜನೆ ಫಲಾನುಭವಿ ಮೀರಾ ಕುಟುಂಬಕ್ಕೆ ಉಡುಗೊರೆ ಕಳುಹಿಸಿದ ಮೋದಿ

              ಯೋಧ್ಯೆ: ಡಿಸೆಂಬರ್ 30 ರಂದು ಅಯೋಧ್ಯೆಗೆ ತೆರಳಿದ್ದ ವೇಳೆ ಭೇಟಿಯಾಗಿದ್ದ ಉಜ್ವಲ ಯೋಜನೆ ಫಲಾನುಭವಿ ಮೀರಾ ಮಾಂಝಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಮತ್ತು ಉಡುಗೊರೆಗಳನ್ನು ಕಳುಹಿಸಿದ್ದಾರೆ.

             ಪ್ರಧಾನಿ ಅವರು ಹೊಸ ವರ್ಷದ ಶುಭಾಶಯದೊಂದಿಗೆ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ.

ಇದರಿಂದ ತುಂಬಾ ಸಂತೋಷವಾಗಿದೆ ಎಂದು ಮೀರಾ ಅವರು ಪಿಟಿಐನೊಂದಿಗೆ ಖುಷಿ ಹಂಚಿಕೊಂಡಿದ್ದಾರೆ. ಪ್ರಧಾನ ಮಂತ್ರಿಯವರು ತನಗೆ ಮತ್ತು ಇಡೀ ಮಾಂಝಿ ನಗರಕ್ಕೆ ಪತ್ರ ಕಳುಹಿಸಿದ್ದಾರೆ ಎಂದು ಹೇಳಿದರು.


               ಉಡುಗೊರೆಯಾಗಿ ಚಹಾ ಲೋಟಗಳು, ಡ್ರಾಯಿಂಗ್‌ ಪುಸ್ತಕ ಮತ್ತು ಬಣ್ಣಗಳು ಸೇರಿದಂತೆ ಹಲವು ವಸ್ತುಗಳು ಹಾಗೂ ಪತ್ರವೊಂದನ್ನು ಕಳುಹಿಸಿದ್ದಾರೆ.

               ಪತ್ರದಲ್ಲಿ ಅವರು, ಮೀರಾ ಅವರ ಮನೆಯಲ್ಲಿ ಚಹಾ ಸವಿದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 'ಅಯೋಧ್ಯೆಯಿಂದ ಬಂದ ನಂತರ ನಾನು ವಿವಿಧ ಟಿವಿ ಚಾನೆಲ್‌ಗಳಲ್ಲಿ ನಿಮ್ಮ ಸಂದರ್ಶನಗಳನ್ನು ನೋಡಿದೆ. ಅನುಭವಗಳನ್ನು ಹಂಚಿಕೊಳ್ಳುವಾಗ ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ತೋರಿದ ನಮ್ರತೆ ಮತ್ತು ವಿಶ್ವಾಸ ಮನಮುಟ್ಟಿದೆ. ನಿಮ್ಮ ಮತ್ತು ಕೋಟ್ಯಂತರ ಭಾರತೀಯರ ಸಂತೋಷವೇ ನನ್ನ ಸಂಪತ್ತು. ಇದು ದೇಶಕ್ಕಾಗಿ ಕೆಲಸ ಮಾಡಲು ನನಗೆ ಹೆಚ್ಚಿನ ಶಕ್ತಿಯನ್ನು ತುಂಬುತ್ತದೆ' ಎಂದು ಬರೆದಿದ್ದಾರೆ.

              'ಉಜ್ವಲ ಯೋಜನೆಯ ಕೋಟ್ಯಂತರ ಫಲಾನುಭವಿಯಾಗಿ, ನೀವು ನನಗೆ ಕೇವಲ ಸಂಖ್ಯೆ ಮಾತ್ರವಲ್ಲ. ಭಾರತೀಯರ ಕನಸುಗಳ ಈಡೇರಿಕೆಗೆ ನಾನು ಇದನ್ನು ಉದಾಹರಣೆಯಾಗಿ ನೋಡುತ್ತೇನೆ' ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ.

ಉಜ್ವಲ ಯೋಜನೆಯ ಫಲಾನುಭವಿಗಳ ಸಂಖ್ಯೆ 10 ಕೋಟಿ ದಾಟಿದೆ. ಅಯೋಧ್ಯೆಯ ಮೀರಾ ಅವರು ಈ ಯೋಜನೆ ಪಡೆದುಕೊಂಡಾಗ ಫಲಾನುಭವಿಗಳ ಸಂಖ್ಯೆ 10 ಕೋಟಿ ಮೈಲಿಗಲ್ಲು ತಲುಪಿತ್ತು.

                ಅಚ್ಚರಿ ಎಂದರೆ ಮೋದಿ ಅವರು ಭೇಟಿ ನೀಡಿದ ಬಳಿಕ ಅಧಿಕಾರಿಗಳು ಮೀರಾ ಅವರ ಮನೆಗೆ ತೆರಳಿ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾದ ಆಯುಷ್‌ ಮಾನ್‌ ಕಾರ್ಡ್‌ ಅನ್ನು ನೀಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries