ತಿರುವನಂತಪುರಂ: ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಮಾಹಿತಿ ನೀಡಲು ನಿರಾಕರಿಸಿದ ಆರು ಅಧಿಕಾರಿಗಳಿಗೆ 65 ಸಾವಿರ ರೂ.ದಂಡ ವಿಧಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಮಾಹಿತಿಯನ್ನು ನಿರಾಕರಿಸುವುದು, ಮಾಹಿತಿ ಹಕ್ಕು ಆಯೋಗಕ್ಕೆ ವರದಿ ಸಲ್ಲಿಸದಿರುವುದು, ಆಯೋಗದ ಶೋಕಾಸ್ ನೋಟಿಸ್‍ಗೆ ಸಕಾಲದಲ್ಲಿ ವಿವರಣೆ ನೀಡದಿರುವುದು ಮತ್ತು ದಾರಿತಪ್ಪಿಸುವ ಉತ್ತರ ನೀಡಿದ ಅಪರಾಧಗಳಿಗಾಗಿ ವಿವಿಧ ಜಿಲ್ಲೆಗಳ ಆರು ಅಧಿಕಾರಿಗಳಿಗೆ 65,000 ರೂ. ದಂಡ ವಿಧಿಸಲಾಗಿದೆ. ಕಡತದಲ್ಲಿ ಮಾಹಿತಿ ಸ್ಪಷ್ಟವಾಗಿದ್ದರೂ ಮಾಹಿತಿ ನೀಡದೆ ಕರ್ತವ್ಯಲೋಪ ಇಲ್ಲಿ ಉಲ್ಲೇಖವಾಗಿದೆ.
ತಿರುವನಂತಪುರಂನ ಜಿ.ಅಜಿತ್ ಕುಮಾರ್ ರವರ ದೂರಿನ ಮೇರೆಗೆ ತಿರುವನಂತಪುರಂ ಕಾರ್ಪೋರೇಶನ್ ನ 2017ರ ಜುಲೈ ತಿಂಗಳಲ್ಲಿದ್ದ ಸಹ ಇಂಜಿನಿಯರ್ ಗೆ 25,000 ರೂಪಾಯಿ ದಂಡ ಮತ್ತು ಕಣ್ಣೂರು ವೆಂಗುಟ್ಟೈ ಮೂಲದ ರನೀಷ್ ನಾರಾಯಣನ್ ಗೆ ಮನಃಪೂರ್ವಕ ಮಾಹಿತಿ ನಿರಾಕರಿಸಿದ ತಿರುವನಂತಪುರಂ ಕೃಷಿ ನಿರ್ದೇಶನಾಲಯದ 2019ರ ಅಧಿಕಾರಿಯೋರ್ವರಿಗೆ 15,000 ರೂಪಾಯಿ ದಂಡವನ್ನು ವಿಧಿಸಲಾಗಿದೆ. ಎರ್ನಾಕುಳಂ ವಟ್ಟಪರಂಬ್ ಬಿ.ಪಿ. ಶಾಜು ಅವರ ಮನವಿಯ ಮೇರೆಗೆ ಅಕ್ಟೋಬರ್ 2017 ರಲ್ಲಿ ಪತ್ತನಂತಿಟ್ಟ ಜಿಲ್ಲೆಯ ಕೊಯಿಪ್ಪುರಂ ಪೋಲೀಸ್ ಠಾಣೆಯ ಗೃಹ ಅಧಿಕಾರಿಗೆ 10,000 ರೂಪಾಯಿಗಳು ಮತ್ತು ಕೊಲ್ಲಂ ಕರಿಂಬಿನ್ಪುಳ ಗೋಪಕುಮಾರ್ ಅವರ ಮನವಿಯ ಮೇರೆಗೆ ಪವಿತ್ರೇಶ್ವರಂ ಗ್ರಾಮ ಪಂಚಾಯತಿ ಕಾರ್ಯದರ್ಶಿಗೆ 5,000 ರೂ.ದಂಡ ವಿಧಿಸಲಾಗಿದೆ.
ಕಾಸರಗೋಡು ಉಳಿಯತ್ತಡ್ಕ ಹುಸೇನ್ ಅವರ ದೂರಿನ ಮೇರೆಗೆ 2017ರಲ್ಲಿ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಿಗೆ 5 ಸಾವಿರ ರೂ, ಪತ್ತನಂತಿಟ್ಟದ ಚುಟ್ಟಿಪಾರ ಪಿ.ಶಶಿಧರನ್ ಅವರ ದೂರಿನಂತೆ ಪತ್ತನಂತಿಟ್ಟ ಪೆÇಲೀಸ್ ಠಾಣೆಯ ಇನ್ಸ್‍ಪೆಕ್ಟರ್‍ಗೆ 5,000 ರೂ. ದಂಡ ವಿಧಿಸಲಾಗಿದೆ. ನಿಗದಿತ ಅವಧಿಯೊಳಗೆ ದಂಡ ಪಾವತಿಸದಿದ್ದಲ್ಲಿ ಇಲಾಖಾ ಮುಖ್ಯಸ್ಥರ ವೇತನದಿಂದ ದಂಡವನ್ನು ಕಡಿತಗೊಳಿಸಬೇಕು ಅಥವಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ರಾಜ್ಯ ಮಾಹಿತಿ ಹಕ್ಕು ಆಯುಕ್ತ ಎ ಅಬ್ದುಲ್ ಹಕೀಂ ಆದೇಶಿಸಿದ್ದಾರೆ.