ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ UPI ಆನ್‌ಲೈನ್ ಪಾವತಿ ವ್ಯವಸ್ಥೆ (UPI Payment) ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪ್ರತಿ ಬ್ಯಾಂಕ್ ಖಾತೆ ಹೊಂದಿರುವ ಬಳಕೆದಾರರ ಫೋನ್‌ನಲ್ಲಿ ಈ Online Payment ಸೌಲಭ್ಯಗಳನ್ನು ಕಾಣಲು ಸಾಧ್ಯವಿದೆ. ಇದರೊಂದಿಗೆ ಇದರ ಬಳಕೆಯು ಸಹ ಹೆಚ್ಚುತ್ತಿದೆ ಸಾಮಾನ್ಯ ಬಿಡ ಅಂಗಡಿಯಿಂದ ಹಿಡಿದು ಶಾಪಿಂಗ್ ಮಾಲ್‌ಗಳವರೆಗೂ ಈ UPI ಪೇಮೆಂಟ್ ವ್ಯವಸ್ಥೆ ಲಭ್ಯವಿದೆ.
ಈ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವಾಗ ಆಕಸ್ಮಿಕವಾಗಿ ಕೆಲವು ಸಮಸ್ಯೆಗಳು ಎದುರಾಗುವುದು ಸಹಜ. ನೀವು ಅಪ್ಪಿತಪ್ಪಿ ಬೇರೆಯವರ ಖಾತೆಗೆ ಹಣ ಕಳುಹಿಸಿದರೆ ಮುಂದೆ ಮಾಡೋದೇನು? ಹಾಗಂತ ತಪ್ಪಾಗಿ ಕಳುಹಿಸಿದ ಹಣವನ್ನು ಮರಳಿ ಪಡೆಯಲು ಸಾಧ್ಯವೇ ಇಲ್ಲ ಅಂತೇನಿಲ್ಲ. ಇದಕ್ಕಾಗಿ ನೀವು ಕೆಲವು ಅಂಶಗಳನ್ನು ಪರಿಪಾಲಿಸಿ ಮತ್ತೆ ನಿಮ್ಮ ಆ ಹಣವನ್ನು ಮರು ಪಡೆಯಬಹುದು.
ನಿಮ್ಮ UPI ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ
ಸಾಮಾನ್ಯವಾಗಿ ನೀವು ಪೇಮೆಂಟ್ ಮಾಡುವಾಗ ಹಲವಾರು ಸಮಸ್ಯೆಗಳು ಎದರಾಗುತ್ತವೆ. ಅದರಲ್ಲಿ ಅತಿ ಹೆಚ್ಚಾಗಿ ತಲೆ ಕೆಡಸುವ ಸನ್ನಿವೇಶವೆಂದರೆ ತಪ್ಪಾದ ಖಾತೆಗೆ ನಿಮ್ಮಿಂದ ಹಣ ವರ್ಗಾವಣೆ ಮಾಡುವುದು. ಬೇರೆಯವರ ಖಾತೆಗೆ ನೀವು ಹಣ ಕಳುಹಿಸಿದರೆ PhonePe, Google Pay ಅಥವಾ Paytm ಜವಾಬ್ದಾರರಾಗುವುದಿಲ್ಲ. ಬದಲಿಗೆ ನಿಮ್ಮ UPI ಲಿಂಕ್ ಆಗಿರುವ ಈ ಬ್ಯಾಂಕ್ ಅನ್ನು ಸಂಪರ್ಕಿಸಬೇಕಾಗುತ್ತದೆ. ಅಂದ್ರೆ ನಿಮ್ಮ ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಇದರ ಬಗ್ಗೆ ಎಲ್ಲ ಮಾಹಿತಿ ಮತ್ತು Transaction ಡೀಟೇಲ್‌ನೊಂದಿಗೆ ದೂರು ನೀಡಬೇಕಾಗುತ್ತದೆ. ಕೇವಲ 3 ದಿನಗಳೊಳಗೆ ಈ ನಿಮ್ಮ ದೂರು ಪರಿಶೀಲಿಸಿ ಪರಿಹಾರ ನೀಡುವುದಾಗಿ RBI ಈಗಾಗಲೇ ಇದಕ್ಕೆ ನಿಯಮವನ್ನು ತಂದಿದೆ.
ಸರಿಯಾದ ಜಾಗದಲ್ಲಿ ನಿಮ್ಮ ದೂರನ್ನು ನೀಡಿ
ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ತಪ್ಪು ಪಾವತಿ ಮಾಡಿದ್ದರೆ ಮೊದಲ ಹಂತವಾಗಿ 18001201740 ನಂಬರ್‌ಗೆ ಕರೆ ಮಾಡಿ ದೂರು ದಾಖಲಿಸಬೇಕು. ನಂತರ ನಿಮ್ಮ ಬ್ಯಾಂಕ್‌ಗೆ ಭೇಟಿ ನೀಡಿ ಮತ್ತು ಅಗತ್ಯವಿರುವ ವಿವರಗಳನ್ನು ಪೂರೈಸುವ ಫಾರ್ಮ್ ಅನ್ನು ಪೂರ್ಣಗೊಳಿಸಿ. ಬ್ಯಾಂಕ್ ನಿಮಗೆ ಸಹಾಯ ಮಾಡಲು ನಿರಾಕರಿಸಿದರೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಓಂಬುಡ್ಸ್‌ಮನ್‌ಗೆ bankingombudsman.rbi.org.in ಮೂಲಕ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.
ವಹಿವಾಟು ಮೆಸೇಜ್‌ಗಳನ್ನು ಡಿಲೀಟ್ ಮಾಡಲೇಬೇಡಿ:
ನಿಮ್ಮ ಫೋನ್‌ನಿಂದ ಯಾವುದೇ ವಹಿವಾಟು ಸಂದೇಶಗಳನ್ನು ಡಿಲೀಟ್ ಮಾಡದಿರುವುದು ಬಹಳ ಮುಖ್ಯವಾಗಿದೆ. ಈ ಮೆಸೇಜ್‌ಗಳು PBL (Payments Bank Ltd) ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಒಳಗೊಂಡಿರುತ್ತವೆ. ಇದು ದೂರು ಪ್ರಕ್ರಿಯೆಯ ಸಮಯದಲ್ಲಿ ಮುಖ್ಯವಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ನೀವು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (NPCI) ವೆಬ್‌ಸೈಟ್‌ನಲ್ಲೂ ಈ ತಪ್ಪು ಪಾವತಿಗಳ ಬಗ್ಗೆ ದೂರು ಸಲ್ಲಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಿದ NPCI ಈ ರೀತಿಯ UPI ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ.
ಆನ್‌ಲೈನ್ UPI ಪೇಮೆಂಟ್ ಮಾಡುವಾಗ ಎಚ್ಚರ!
ಆನ್‌ಲೈನ್ ಪಾವತಿಗಳನ್ನು ಮಾಡುವ ಮೊದಲು ಯಾವಾಗಲೂ ಜಾಗರೂಕರಾಗಿರಿ. ಅಂತಹ ತೊಡಕುಗಳನ್ನು ತಪ್ಪಿಸಲು ನೀವು ಹಣವನ್ನು ವರ್ಗಾಯಿಸುತ್ತಿರುವ ಖಾತೆ ಅಥವಾ UPI ಸರಿಯಾಗಿದೆಯೇ ಎಂದು ಒಂದೆರಡು ಬಾರಿ ಪರಿಶೀಲಿಸಿಕೊಳ್ಳಿ. ಮೊತ್ತ ದೊಡ್ಡದಾಗಿದ್ದರೆ ಮೊದಲು 1 ರೂಗಳನ್ನು ಕಳುಹಿಸಿ ಪರೀಕ್ಷಿಸಿದ ನಂತರ ಬಾಕಿ ಹಣವನ್ನು ಕಳುಹಿಸಬಹುದು. ಇದರಿಂದ ಭಾರಿ ನಷ್ಟವನ್ನು ತಪ್ಪಿಸಬಹುದು. ಡಿಜಿಟಲ್ ವಹಿವಾಟಿನ ಸಮಯದಲ್ಲಿ ಜಾಗರೂಕರಾಗಿರಿ ಮತ್ತು ಅನಗತ್ಯ ತೊಡಕುಗಳನ್ನು ತಡೆಗಟ್ಟಲು ನಿಖರತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.