HEALTH TIPS

ಎಚ್‌-1ಬಿ ವೀಸಾ ಶುಲ್ಕದಲ್ಲಿ ಭಾರಿ ಏರಿಕೆ

              ವಾಷಿಂಗ್ಟನ್‌: ವಲಸಿಗರಲ್ಲದವರಿಗೆ ನೀಡುವ ಎಚ್‌-1ಬಿ, ಎಲ್‌-1 ಮತ್ತು ಇಬಿ-5 ವೀಸಾಗಳ ಶುಲ್ಕವನ್ನು ಅಮೆರಿಕ ಸರ್ಕಾರ ಏರಿಕೆ ಮಾಡಿದೆ.

               2016ರ ಬಳಿಕ ಇದೇ ಮೊದಲ ಬಾರಿಗೆ ಶುಲ್ಕ ಏರಿಕೆ ಮಾಡಲಾಗಿದ್ದು, ಇದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

                ಎಚ್‌1-ಬಿ ವೀಸಾಕ್ಕೆ ಅರ್ಜಿ ಸಲ್ಲಿಸುವ (ಫಾರಂ ಐ-129) ಶುಲ್ಕವನ್ನು ಅಮೆರಿಕ ಡಾಲರ್‌ 460 (₹38,177) ರಿಂದ 780ಕ್ಕೆ (₹ 64,735) ಏರಿಕೆ ಮಾಡಲಾಗಿದೆ.

              ಎಲ್‌ 1 ವೀಸಾದ ಶುಲ್ಕವನ್ನು 460 ಡಾಲರ್‌ನಿಂದ (₹38,177) 1,385 ಡಾಲರ್‌ಗೆ (ಅಂದಾಜು ₹1.14 ಲಕ್ಷ) ಏರಿಕೆ ಮಾಡಲಾಗಿದೆ. ಇಬಿ-5 ವೀಸಾದ ಶುಲ್ಕವನ್ನು 3,675 ಡಾಲರ್‌ನಿಂದ (ಅಂದಾಜು ₹3 ಲಕ್ಷ) 11,160 ಡಾಲರ್‌ಗೆ (ಅಂದಾಜು ₹9.25 ಲಕ್ಷ) ಹೆಚ್ಚಿಸಿರುವುದಾಗಿ ಅಮೆರಿಕ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

                   ಎಚ್‌1-ಬಿ ವೀಸಾದ ನೋಂದಣಿ ಶುಲ್ಕ 10 ಡಾಲರ್‌ನಿಂದ (₹ 830) 215 ಡಾಲರ್‌ಗೆ (₹ 17,843) ಏರಿಕೆಯಾಗಲಿದ್ದು, ಅದು ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಎಂದು ಮೂಲಗಳು ಹೇಳಿವೆ.

                 ಅಮೆರಿಕದ ಕಂಪನಿಗಳು ವಿದೇಶಿ ನೌಕರರನ್ನು ಮುಖ್ಯವಾಗಿ ತಾಂತ್ರಿಕ ಪರಿಣತ ಕ್ಷೇತ್ರಗಳಿಗೆ ನೇಮಕ ಮಾಡಿಕೊಳ್ಳಲು ಎಚ್-1ಬಿ ವೀಸಾ ಅಗತ್ಯವಾಗಿದೆ. ತಂತ್ರಜ್ಞಾನ ಕಂಪನಿಗಳು ಭಾರತ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳ ಸಾವಿರಾರು ನೌಕರರನ್ನು ಪ್ರತಿ ವರ್ಷ ಈ ಮೂಲಕ ನೇಮಕ ಮಾಡಿಕೊಳ್ಳುತ್ತಿವೆ.

                ಇಬಿ-5 ವೀಸಾ ಯೋಜನೆಯನ್ನು ಅಮೆರಿಕ ಸರ್ಕಾರವು 1990ರಲ್ಲಿ ಪರಿಚಯಿಸಿತ್ತು. ಹೂಡಿಕೆದಾರರಿಗೆ ಮತ್ತು ಅವರ ಕುಟುಂಬಕ್ಕೆ ಈ ವೀಸಾ ಪಡೆಯಬಹುದಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries