ಥೈರಾಯ್ಡ್ ಸಮಸ್ಯೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ, ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ, ಅದರಲ್ಲೂ ಯೌವನ ಪ್ರಾದಲ್ಲಿಯೇ ಸಮಸ್ಯೆ ಕಂಡು ಬಂದರೆ ಇದರಿಂದ ಗರ್ಭಧಾರಣೆಗೆ ತೊಂದರೆಯಾಗುವುದು.ಅಲ್ಲದೆ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಕ್ಯಾನ್ಸರ್ ಅಪಾಯ ಕೂಡ ಇದೆ ಆದ್ದರಿಂದ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಾಗ ಕೂಡಲೇ ಚಿಕಿತ್ಸೆ ಪಡೆಯುವುದು ಒಳ್ಳೆಯದು:
ಥೈರಾಯ್ಡ್‌ನ ಈ 10 ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ
ಥೈರಾಯ್ಡ್ ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಆಹಾರಗಳು
* ಮೀನು: ಥೈರಾಯ್ಡ್ ಸಮಸ್ಯೆ ಇರುವವರಿಗೆ ಮೀನಿನ ಆಹಾರ ಒಳ್ಳೆಯದು, ಇದರಲ್ಲಿ ವಿಟಮಿನ್ ಬಿ 12 ಹಾಗೂ ಒಮೆಗಾ 3 ಕೊಬ್ಬಿನಂಶವಿದೆ.
* ಪ್ರತಿದಿನ ಒಂದು ಮೊಟ್ಟೆ ತಿನ್ನುವುದು ಒಳ್ಳೆಯದು. ನೀವು ಮೊಟ್ಟೆಯನ್ನು ಅದರ ಹಳದಿ ಸಹಿತ ಸೇವಿಸಿ.
* ನೀವು ಅಡುಗೆಗೆ ಅಯೋಡಿಯನ್‌ಯುಕ್ತ ಉಪ್ಪು ಮಾತ್ರ ಬಳಸಿ. ಅಯೋಡಿಯನ್ ಇರುವ ಕಲ್ಲುಪ್ಪು ಅಥವಾ ಪುಡಿ ಉಪ್ಪು ಬಳಸಿ.
* ಇನ್ನು ಹೈಪೋಥೈರಾಯ್ಡ್ ಸನಸ್ಯೆ ಇರುವವರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆ, ಪ್ರೂನ್ಸ್ ಮಲಬದ್ಧತೆ ತಡೆಗಟ್ಟುವಲ್ಲಿ ಸಹಕಾರಿ.
* ಲಿವರ್ ತಿನ್ನುವುದು ಕೂಡ ಒಳ್ಳೆಯದು. ಲಿವರ್‌ನಲ್ಲಿ ವಿಟಮಿನ್ ಬಿ, ಬಿ12, ಫೋಲೆಟ್, ಖನಿಜಾಂಶಗಳು, ಕಬ್ಬಿಣದಂಶ,ಸತು ಇವುಗಳು ಅಧಿಕವಿರುತ್ತದೆ.
ಬೆಣ್ಣೆ ಹಣ್ಣು ಕೂಡ ಥೈರಾಯ್ಡ್ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು.
ಬಾಳೆಹಣ್ಣು ಕೂಡ ಥೈರಾಯ್ಡ್ ಸಮಸ್ಯೆ ಇರುವವರಿಗೆ ಒಳ್ಳೆಯ ಆಹಾರವಾಗಿದೆ.
ಯಾವ ಆಹಾರಗಳು ಒಳ್ಳೆಯದಲ್ಲ
* ಸಂಸ್ಕರಿಸಿದ ಆಹಾರ ಪದಾರ್ಥಗಳು ಥೈರಾಯ್ಡ್‌ಗೆ ಒಳ್ಳೆಯದಲ್ಲ
* ಸೋಯಾ ಗೋಧಿ ಈ ಬಗೆಯ ಆಹಾರ ಒಳ್ಳೆಯದಲ್ಲ
* ಸಕ್ಕರೆ ಪದಾರ್ಥ ದೂರವಿಡಿ
* ಜಂಕ್ ಆಹಾರ ಸೇವಿಸಬೇಡಿ