ಪತ್ತನಂತಿಟ್ಟ: ಕುಂಭಮಾಸ ಪೂಜೆಯ ಅಂಗವಾಗಿ ಶಬರಿಮಲೆಯಲ್ಲಿ 13ರಂದು ದೇಗುಲದ ಗರ್ಭಗೃಹ ಬಾಗಿಲು ತೆರೆಯಲಾಗುವುದು. ಸಂಜೆ 5 ಗಂಟೆಗೆ ತಂತ್ರಿ ಕಂಠಾರರ್ ಮಹೇಶ್ ಮೋಹನ್ ಅವರ ಉಪಸ್ಥಿತಿಯಲ್ಲಿ ಮೇಲ್ಶಾಂತಿ ಪಿ.ಎನ್.ಮಹೇಶ್ ಬಾಗಿಲು ತೆರೆದು ದೀಪ[ ಬೆಳಗಿಸುವರು.
ಮರುದಿನ ಬೆಳಗ್ಗೆ 5.30ಕ್ಕೆ ಮಹಾಗಣಪತಿ ಹೋಮದೊಂದಿಗೆ ಪೂಜೆಗಳು ಆರಂಭವಾಗಲಿವೆ.
ಫೆ.14ರಿಂದ 18ರವರೆಗೆ ಪ್ರತಿದಿನ ಉದಯಾಸ್ತಮಯ ಪೂಜೆ, ಪಡಿಪೂಜೆ, ಕಲಭಾಭಿಷೇಕ, ಪುಷ್ಪಾಭಿಷೇಕ, ಅಪ್ಪಾಭಿಷೇಕ ನಡೆಯಲಿದೆ. 13 ರಂದು 30,000 ಮತ್ತು ಇತರ ದಿನಗಳಲ್ಲಿ 50,000 ಭಕ್ತರಿಗೆ ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ಲಭ್ಯವಿರುತ್ತದೆ.
ನಿಲಯ್ಕಲ್ ನಲ್ಲಿ ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆಯನ್ನೂ ಆರಂಭಿಸಲಾಗಿದೆ. ಸನ್ನಿಧಾನಕ್ಕೆ ಆಗಮಿಸುವ ಅಯ್ಯಪ್ಪ ಭಕ್ತರ ವಾಹನಗಳು ಸ್ಟ್ಯಾಂಡ್‍ನಲ್ಲಿ ನಿಲುಗಡೆ ಮಾಡಬೇಕಾಗಿದ್ದು, ಪಂಬಾದಲ್ಲಿ ಪಾರ್ಕಿಂಗ್ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಕೆಎಸ್‍ಆರ್‍ಟಿಸಿ ಪಂಬಾ-ನಿಲಯ್ಕಲ್ ಮಾರ್ಗದಲ್ಲಿ ಸರಣಿ ಸೇವೆಯನ್ನು ನಡೆಸಲಿದೆ.