ಕಾಸರಗೋಡು: ನೀಲೇಶ್ವರದಲ್ಲಿ ನೂತನ ಬಸ್ ನಿಲ್ದಾಣ ಕಮ್ ಶಾಪಿಂಗ್ ಕಾಂಪ್ಲೆಕ್ಸ್‍ಗೆ ಶಿಲಾನ್ಯಾಸ ಸಮಾರಂಭ ಫೆ.16ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ತ್ರಿಕ್ಕರಿಪುರ ಶಾಸಕ ಎಂ.ರಾಜಗೋಪಾಲನ್‍ಶಿಲಾನ್ಯಾಸ ನೆರವೇರಿಸುವರು. ಒಟ್ಟು 16.15 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣದ ಪ್ರಾಂಗಣ ಹಾಗೂ ಮೂರು ಅಂತಸ್ತಿನ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಭೂಗತ ಪಾಕಿರ್ಂಗ್ ಸೌಲಭ್ಯವಿದೆ. ಮೊದಲ ಎರಡು ಮಹಡಿಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಮೂರನೇ ಮಹಡಿಯಲ್ಲಿ ಕಚೇರಿಗಳು ಕಾರ್ಯನಿರ್ವಹಿಸಲಿವೆ.
ಕೇರಳ ನಗರ ಮತ್ತು ಗ್ರಾಮೀಣಾಭಿವೃದ್ಧಿ ಹಣಕಾಸು ನಿಗಮದ ಮೂಲಕ 14.53 ಕೋಟಿ ರೂ.ಸಾಲವಾಗಿ ಪಡೆದುಕೊಳ್ಳಲಿದ್ದು, ಉಳಿದ ಮೊತ್ತವನ್ನು ನಗರಸಭೆ ತನ್ನ ಸ್ವಂತ ನಿಧಿಯಿಂದ ಭರಿಸಲಿದೆ. ಸಿವಿಲ್ ಕಾಮಗಾರಿ, ವಿದ್ಯುದ್ದೀಕರಣ, ಅಗ್ನಿಶಾಮಕ, ಲಿಫ್ಟ್ ಮತ್ತು ಪೂರಕ ಸೌಲಭ್ಯಗಳಂತಹ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಂದಾಜು ವೆಚ್ಚಕ್ಕೆ ತಾಂತ್ರಿಕ ಅನುಮೋದನೆ ನೀಡಲಾಗಿದೆ. ಈ ಪೈಕಿ 11.6 ಕೋಟಿ ರೂ.ಗಳ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ.