ತಿರುವನಂತಪುರಂ: ಕೇರಳ ಸರ್ಕಾರವು 2024-25ನೇ ಸಾಲಿನ ಬಜೆಟ್ ಅನ್ನು ಇಂದು (ಸೋಮವಾರ) ಮಂಡಿಸಿದೆ. ಬಜೆಟ್‌ನಲ್ಲಿ ಘೋಷಣೆಗಳು ಮಾಡಿರುವ ಅಂಶಗಳು ವಾಸ್ತವಕ್ಕೆ ದೂರವಾದದ್ದು ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು ಟೀಕಿಸಿದೆ.
ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲ್ ಅವರು ಬಜೆಟ್ ಮಂಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ. ಡಿ. ಸತೀಶನ್ ಅವರು 2023-24ನೇ ಹಣಕಾಸು ವರ್ಷದಲ್ಲಿ ಯೋಜಿತ ವೆಚ್ಚದ ಶೇ.55ರಷ್ಟು ಮಾತ್ರ ಸರ್ಕಾರ ಖರ್ಚು ಮಾಡಿದ್ದು, ಇನ್ನೆರಡು ತಿಂಗಳಲ್ಲಿ ಮುಗಿಯಲಿರುವ ಬಜೆಟ್ ವರ್ಷದಲ್ಲಿ ಸಾರ್ವಜನಿಕರಿಗೆ ಹೇಗೆ ಭರವಸೆಯ ಘೋಷಣೆಗಳನ್ನು ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಬಜೆಟ್‌ನಲ್ಲಿ ರಬ್ಬರ್ ಬೆಂಬಲ ಬೆಲೆಯನ್ನು ₹170 ರಿಂದ ₹180 ರೂಪಾಯಿಗೆ ಏರಿಸಲಾಗಿದೆ. ಕೇವಲ ₹10 ರೂಪಾಯಿ ಹೆಚ್ಚಳ ಮಾಡಿರುವುದು ರಬ್ಬರ್ ಬೆಳೆಗಾರರನ್ನು ಅವಮಾನಿಸಿದಂತಾಗಿದೆ ಎಂದು ಸತೀಶನ್ ಕಿಡಿಕಾರಿದ್ದಾರೆ.