ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದು ಬಜೆಟ್‌ನ ಆರಂಭಿಕ ಘೋಷಣೆಗಳಲ್ಲಿಯೇ ಅವರು ಸಾರಿಗೆಗಾಗಿ ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ.
ಸಾಮಾನ್ಯ ರೈಲುಗಳ ಬೋಗಿಗಳನ್ನು ವಂದೇ ಭಾರತ್ ದರ್ಜೆಗೇರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದಲ್ಲದೇ ಮೆಟ್ರೋ ಮತ್ತು ನಮೋ ರೈಲನ್ನು ಇತರ ನಗರಗಳಿಗೂ ವಿಸ್ತರಿಸಲಿದೆ.
ಸುಮಾರು 40 ಸಾವಿರ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ದರ್ಜೆಗೆ ಪರಿವರ್ತಿಸಲಾಗುವುದು ಎಂದು ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಇದರೊಂದಿಗೆ 3 ಹೊಸ ರೈಲು ಕಾರಿಡಾರ್‌ಗಳ ನಿರ್ಮಾಣವನ್ನೂ ಸರ್ಕಾರ ಘೋಷಿಸಿದ್ದು, ಸರಕು ಸಾಗಣೆ ಕಾರಿಡಾರ್‌ನ ಕಾಮಗಾರಿಯೂ ನಡೆಯುತ್ತಿದೆ.
ಕಳೆದ ಹತ್ತು ವರ್ಷಗಳಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆಯೂ ಹೆಚ್ಚಿದೆ ಎಂದರು. ಪ್ರಸ್ತುತ, ದೇಶದಲ್ಲಿ 149 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ ಎಂದರು.