ಮುಂಬೈ: ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ ಫೆ.03 ರಂದು ತನ್ನ 3 ನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು ನಿವ್ವಳ ಲಾಭದಲ್ಲಿ ಶೇ.35 ರಷ್ಟು ಕುಸಿತ ದಾಖಲಿಸಿದೆ.
ಡಿಸೆಂಬರ್ ತ್ರೈಮಾಸಿಕದಲ್ಲಿ ಎಸ್ ಬಿಐ ನ ಲಾಭ 9,164 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಎಸ್ ಬಿಐ 14,205 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು ಆದಾಯ 1,18,193 ಕೋಟಿ ರೂ.ಗೆ ಏರಿಕೆಯಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 98,084 ಕೋಟಿ ರೂ.ಗೆ ಏರಿಕೆಯಾಗಿತ್ತು ಎಂದು ಬ್ಯಾಂಕ್ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ತ್ರೈಮಾಸಿಕದಲ್ಲಿ ಬ್ಯಾಂಕ್ 1,06,734 ಕೋಟಿ ರೂ.ಗಳ ಬಡ್ಡಿ ಆದಾಯ ಗಳಿಸಿದ್ದು, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 86,616 ಕೋಟಿ ರೂ.ಪಾಯಿಗಳ ಆದಾಯ ಗಳಿಸಿತ್ತು. ಕಳೆದ ವರ್ಷದ ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಶೇ.3.14 ರಿಂದ ಡಿಸೆಂಬರ್ ಅಂತ್ಯದ ವೇಳೆಗೆ ಬ್ಯಾಂಕಿನ ಒಟ್ಟು ಮುಂಗಡಗಳ ಒಟ್ಟು ಅನುತ್ಪಾದಕ ಆಸ್ತಿಗಳು (NPA) ಶೇಕಡಾ 2.42 ಕ್ಕೆ ಇಳಿದಿದೆ.
ಅದೇ ರೀತಿ, ನಿವ್ವಳ ಅನುತ್ಪಾದಕ ಆಸ್ತಿಗಳು (ಎನ್‌ಪಿಎ) ಸಹ ಒಂದು ವರ್ಷದ ಹಿಂದೆ ಇದೇ ಅವಧಿಯ ಅಂತ್ಯಕ್ಕೆ ಇದ್ದ ಶೇ.0.77 ರಷ್ಟಿಂದ ಶೇ. 0.64 ಕ್ಕೆ ಕಡಿಮೆಯಾಗಿದೆ.
ಯಾವುದೇ ಮನವಿ ಚೀಟಿ ಇಲ್ಲದೇ ಗ್ರಾಹಕರು ಏಕಕಾಲಕ್ಕೆ 20,000 ರೂಗಳ ವರೆಗೆ 2,000 ಮುಖ ಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ವಿನಿಮಯದ ಸಮಯದಲ್ಲಿ ಗ್ರಾಹಕರು ಯಾವುದೇ ಗುರುತಿನ ಚೀಟಿಯನ್ನು ಒದಗಿಸುವ ಅಗತ್ಯವೂ ಇಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾನುವಾರ ಸ್ಪಷ್ಟಪಡಿಸಿದೆ.
ಗ್ರಾಹಕರು 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಅಥವಾ ಠೇವಣಿ ಇರಿಸುವ ವೇಳೆ ಅರ್ಜಿ, ಮನವಿ ಸಲ್ಲಿಸಬೇಕೆ ಎಂಬ ಅನುಮಾನಗಳು ಜನರಲ್ಲಿ ಮೂಡಿವೆ. ಈ ಹಿನ್ನೆಲೆಯಲ್ಲಿ ಅನುಮಾನಗಳನ್ನು ಪರಿಹರಿಸಲು ಎಸ್‌ಬಿಐ ಈ ಸ್ಪಷ್ಟನೆ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಆದರೆ, 2,000 ಮುಖಬೆಲೆಯ ನೋಟುಗಳು ಕಾನೂನುಬದ್ಧ ಮಾನ್ಯತೆ ಹೊಂದಿರುವುದಾಗಿಯೂ ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿತ್ತು.