ನವದೆಹಲಿ: ನಿಗದಿತ ನಿರ್ವಹಣೆಯ ಕಾರಣದಿಂದಾಗಿ ಇ-ಫೈಲಿಂಗ್ ಪೋರ್ಟಲ್‌ನ ಸೇವೆಯು ಫೆಬ್ರವರಿ 3 ರಿಂದ ಫೆಬ್ರವರಿ 5 ರವರೆಗೆ ಲಭ್ಯವಿರುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತಿಳಿಸಿದೆ.
"... ಸಿಸ್ಟಂನ ತಾಂತ್ರಿಕ ಉನ್ನತೀಕರಣವನ್ನು ಒಳಗೊಂಡ ನಿಗದಿತ ನಿರ್ವಹಣಾ ಚಟುವಟಿಕೆಯಿಂದಾಗಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತೆರಿಗೆದಾರರ ಸೇವೆಗಳನ್ನು ಶನಿವಾರ(03.02.24) ಮಧ್ಯಾಹ್ನ 2 ರಿಂದ ಸೋಮವಾರ (05.02.24) ಬೆಳಗ್ಗೆ 6 ರವರೆಗೆ ನಿರ್ಬಂಧಿಸಲಾಗುತ್ತಿದೆ" ಆದಾಯ ತೆರಿಗೆ ಇಲಾಖೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.