ತಿರುವನಂತಪುರ: ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಲಾಗಿದೆ. ಅವರ ವೇತನವನ್ನು ರೂ.7000ಕ್ಕೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಮಾಹಿತಿ ನೀಡಿದರು.
ಇದರ ಪ್ರಕಾರ 26,125 ಮಂದಿ ವೇತನ ಹೆಚ್ಚಳದ ಲಾಭ ಪಡೆಯಲಿದ್ದಾರೆ. ಎರಡು ತಿಂಗಳ ವೇತನ ವಿತರಣೆಗೆ 31.35 ಕೋಟಿ ರೂ.ಅನುಮತಿಸಲಾಗಿದೆ.
ಕಳೆದ ಡಿಸೆಂಬರ್‍ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಎರಡು ತಿಂಗಳ ವೇತನ ವಿತರಣೆಗೆ 26.11 ಕೋಟಿ ರೂ.ನೀಡಲಾಗಿತ್ತು. ಮೊತ್ತವನ್ನು ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನ ನೀಡಲು ನೀಡಲಾಗಿದೆ.