ನವದೆಹಲಿ: ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರದ ಮೂರನೇ ಅವಧಿಯಲ್ಲಿ ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದರು.
ನವದೆಹಲಿ: ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರದ ಮೂರನೇ ಅವಧಿಯಲ್ಲಿ ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದರು.
ನವದೆಹಲಿಯ ಭಾರತ್ ಮಂಟಪದಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ನಮ್ಮ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವುದು ಖಚಿತ.
ದೇಶದಲ್ಲಿ ತನ್ನದೇ ಆದ ಆಕಾಂಕ್ಷೆಗಳು ಮತ್ತು ಭರವಸೆಗಳೊಂದಿಗೆ ಹೊಸ ಮಧ್ಯಮ ವರ್ಗ ಹೊರಹೊಮ್ಮಿದೆ. ಮಧ್ಯಮ ವರ್ಗದ ಆದಾಯ ಮತ್ತು ಮಿತಿಯನ್ನು ವಿಸ್ತರಿಸಲಾಗಿದೆ. ಈ ಅಂಶಗಳು ಚಲನಶೀಲತೆಯ ವಲಯದಲ್ಲಿ ಹೊಸ ಎತ್ತರವನ್ನು ಖಚಿತಪಡಿಸುತ್ತದೆ. 2014 ರ ಮೊದಲು, 12 ಕೋಟಿ ಕಾರುಗಳು ಮಾರಾಟವಾಗಿದ್ದವು. ಭಾರತದಲ್ಲಿ 2014 ರಿಂದ 21 ಕೋಟಿಗೂ ಹೆಚ್ಚು ಕಾರುಗಳ ಮಾರಾಟವಾಗಿದೆ ಎಂದು ಅವರು ಹೇಳಿದರು.
'2014 ರ ಮೊದಲು, ವಾರ್ಷಿಕವಾಗಿ 2,000 ಕೋಟಿ ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗುತ್ತಿದ್ದವು. ಈಗ ವಾರ್ಷಿಕ ಆಧಾರದ ಮೇಲೆ ಸುಮಾರು 12 ಲಕ್ಷ ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗುತ್ತಿವೆ. ಭಾರತವು ಪ್ರಯಾಣಿಕ ಕಾರುಗಳ ಮಾರಾಟದಲ್ಲಿ 60% ಏರಿಕೆ ಕಂಡಿದೆ. ದ್ವಿಚಕ್ರ ವಾಹನಗಳ ಮಾರಾಟ ಸಂಖ್ಯೆಯಲ್ಲಿ 70% ಏರಿಕೆಯನ್ನೂ ಕಂಡಿದೆ ಎಂದು ಪ್ರಧಾನ ಮೋದಿ ಹೇಳಿದರು.