ಕಾಸರಗೋಡು: ಕಾಞಂಗಾಡಿನ ಮಾಙËಡ್ ನಿವಾಸಿಯೊಬ್ಬರನ್ನು ಹನಿಟ್ರ್ಯಾಪ್‍ಗೆ ಒಳಪಡಿಸಿ ಅವರಿಂದ 5ಲಕ್ಷ ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರು ಸಎರಿದಂತೆ ಏಳು ಮಂದಿಯನ್ನು ಮೇಲ್ಪರಂಬ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಯಿಕ್ಕೋಡ್ ಪೆರುವಣ್ಣ ನಿವಾಸಿ ಫೈಸಲ್, ಪತ್ನಿ ಎಂ.ಪಿ ರುಬೀನಾ, ಕಾಸರಗೋಡು ಶಿರಿಬಾಗಿಲು ನಿವಾಸಿ ಸಿದ್ದೀಕ್, ಮಾಙËಡ್ ನಿವಾಸಿ ದಿಲ್ಶಾದ್, ಮುಟ್ಟತ್ತೋಡಿಯ ನಫೀಸತ್ ಮಿಸ್ರಿಯಾ, ಮಾಙËಡ್ ನಿವಾಸಿ ಅಬ್ದುಲ್ಲಕುಞÂ, ಪಡನ್ನಕ್ಕಾಡ್ ನಿವಾಸಿ ರಫೀಕ್, ಬಂಧಿತರು. ಮೇಲ್ಪರಂಬ ಠಾಣೆ ಇನ್ಸ್‍ಪೆಕ್ಟರ್ ಅರುಣ್‍ಮೋಹನ್ ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ.
ಮಾಙËಡ್‍ನ ತಾಮರಕ್ಕುಳಿ ನಿವಾಸಿ, 59ರ ಹರೆಯದ ವ್ಯಕ್ತಿಯನ್ನು ಹನಿಟ್ರ್ಯಾಪ್‍ಗೆ ಸಿಲುಕಿಸಿ ಇವರಿಂದ 5ಲಕ್ಷ ಹಣ ಎಗರಿಸಿರುವ ಪ್ರಕರಣ ಇದಾಗಿದೆ. ವ್ಯಕ್ತಿಯನ್ನು ಮೊದಲು ರುಬೀನಾ ಪರಿಚಯಮಾಡಿಕೊಂಡಿದ್ದು, ನಂತರ ಇವರೊಂದಿಗೆ ಸಲುಗೆ ಬೆಳೆಸಿ, ಕಾಸರಗೋಡಿನ ಅಂಗಡಿಯೊಂದರಿಂದ ಲ್ಯಾಪ್‍ಟಾಪ್ ಖರೀದಿಸಿಕೊಡುವ ಬಗ್ಗೆಯೂ ಮಾತುಕತೆ ನಡೆಸಿದ್ದಳು. ಈ ಮಧ್ಯೆ ಜ. 25ರಂದು ವ್ಯಕ್ತಿಯೊಂದಿಗೆ ಮಂಗಳೂರಿಗೆ ತೆರಳಿದ ರುಬೀನಾ, ಅಲ್ಲಿನ ಹೋಟೆಲ್ ಒಂದರಲ್ಲಿ ಕೊಠಡಿಯೊಂದನ್ನು ಪಡೆದು, ವ್ಯಕ್ತಿಯ ನಗ್ನ ಚಿತ್ರ ತೆಗೆದಿದ್ದಾಳೆ. ನಂತರ, ವ್ಯಕ್ತಿ ತನ್ನನ್ನು ಅತ್ಯಾಚಾರಗೈದಿರುವುದಾಗಿ ತನ್ನ ಸಹಚರರಿಗೆ ತಿಳಿಸಿದ್ದಾಳೆ. ನಂತರ ಇವರೆಲ್ಲರೂ ಸಂಚಿನಲ್ಲಿ ಶಾಮೀಲಾಗಿ, ವ್ಯಕ್ತಿಯನ್ನು ಪಡನ್ನಕ್ಕಾಡಿನ ಮನೆಯೊಂದಕ್ಕೆ ಕರೆಸಿಕೊಂಡು ಹಣ ಎಗರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.