ಕಾಸರಗೋಡು: ಪೋಲೀಸ್ ಇಲಾಖೆಯಲ್ಲಿ ಪೋಲೀಸ್ ಕಾನ್‍ಸ್ಟೇಬಲ್ (ಎಪಿಬಿ) (ಕೆಎಪಿ 4ನೇ ಬೆಟಾಲಿಯನ್) (ಕಾಟಗರಿ ನಂಬರ್. 537/2022) ಹುದ್ದೆಯ ಶಾರ್ಟ್‍ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳಿಗೆ ದೈಹಿಕ ಅಳತೆ ಮತ್ತು ಫಿಟ್‍ನೆಸ್ ಪರೀಕ್ಷೆಯು ಫೆಬ್ರವರಿ 6, 7, 8, 9 ಹಗೂ 12 ರಂದು ಕಾಸರಗೋಡು ಉಳಿಯತ್ತಡ್ಕ ಮಧೂರು ಗ್ರಾಮ ಪಂಚಾಯಿತಿಯ ಮೈದಾನ, ಕೋಳಿಯಡ್ಕ ಚೆಮ್ನಾಡ್ ಗ್ರಾಮ ಪಂಚಾಯಿತು ಕಚೇರಿ ಬಳಿಯ ರಾಜೀವ್ ಗಾಂಧಿ ಮೆಮೋರಿಯಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ದೈಹಿಕ ಸಾಮಥ್ರ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅಂದು ಕಾಸರಗೋಡು ಜಿಲ್ಲಾ ಕೆಪಿಎಸ್‍ಸಿ ಕಚೇರಿಯಲ್ಲಿ ಸರ್ಟಿಫಿಕೇಟ್ ವೆರಿಫಿಕೇಷನ್ ನಡೆಸಲಿದೆ. ಅಭ್ಯರ್ಥಿಗಳು ಪೆÇ್ರಫೈಲ್‍ನಿಂದ ಡೌನ್‍ಲೋಡ್ ಮಾಡಿದ ಅಡ್ಮಿಷನ್ ಟಿಕೆಟ್, ಮೂಲ ಗುರುತಿನ ದಾಖಲೆ, ಅಸಿಸ್ಟೆಂಟ್ ಸರ್ಜನ್/ ಜೂನಿಯರ್ ಕನ್ಸಲ್ಟೆಂಟ್ ರ್ಯಾಂಕ್ ಕಡಿಮೆಯಿಲ್ಲದ ಮೆಡಿಕಲ್ ಆಫೀಸರ್ ನೀಡಿದ ಮೆಡಿಕಲ್ ಸರ್ಟಿಫಿಕೇಟ್ ಎಂಬಿವುಗಳೊಂದಿಗೆ ಹಾಜರಾಗಬೇಕು. ಅಭ್ಯರ್ಥಿಗಳಿಗಿರುವ ಪೆÇ್ರಫೈಲ್ ಸಂದೇಶ, ಎಸ್‍ಎಂಎಸ್ ಈಗಾಗಲೇ ನೀಡಲಾಗಿದೆ ಎಂದು ಕೆಪಿಎಸ್‍ಸಿ ಜಿಲ್ಲಾ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.