ತಿರುವನಂತಪುರ: ಜನರು ಹೆಚ್ಚು ಓದುವ ಸುದ್ದಿಗಳ ಬಗ್ಗೆ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಾಮಾಜಿಕ ಮಾಧ್ಯಮಗಳು, ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳ ಮೂಲಕ ಜನರು ಓದುವ ಸುದ್ದಿಗಳ ಕುರಿತು ಸರ್ಕಾರವು ಸಮೀಕ್ಷೆಯನ್ನು ನಡೆಸಲಿದೆ.
ಕೇರಳ ಡಿಜಿಟಲ್ ವಿಶ್ವವಿದ್ಯಾಲಯವು 65 ಲಕ್ಷ ರೂಪಾಯಿ ವೆಚ್ಚದಲ್ಲಿ ಅಧ್ಯಯನ ನಡೆಸಲಿದೆ. ಖಾಸಗಿ ಸಂಸ್ಥೆಗಳು ಸಮೀಕ್ಷೆಗೆ ಆಸಕ್ತಿ ತೋರದಿದ್ದಾಗ ಡಿಜಿಟಲ್ ವಿವಿ ನೀಡಿದ್ದ ಟೆಂಡರ್ ನ್ನು ಸರ್ಕಾರ ಒಪ್ಪಿಕೊಂಡಿದೆ.
ಪ್ರತಿ ವರ್ಷ ರಾಯಿಟರ್ಸ್ ನಡೆಸುವ ಸಮೀಕ್ಷೆಯ ಮಾದರಿಯಲ್ಲಿ ಡಿಜಿಟಲ್ ವಿಶ್ವವಿದ್ಯಾಲಯವೂ ವರದಿ ಸಿದ್ಧಪಡಿಸಲಿದೆ. ಪ್ರತಿ ಮಾಧ್ಯಮಗಳಲ್ಲಿ ಜನರು ಯಾವ ರೀತಿಯ ಸುದ್ದಿಗಳಿಗೆ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಸಮೀಕ್ಷೆಯು ಪತ್ತೆಮಾಡಲಿದೆ. ಕಳೆದ ವರ್ಷ ರಾಯಿಟರ್ಸ್ ಸಮೀಕ್ಷೆಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ರಾಷ್ಟ್ರೀಯ ರಾಜಕೀಯ ಜನರ ನೆಚ್ಚಿನ ವಿಷಯವಾಗಿತ್ತು.
ಇದೇ ರೀತಿಯ ಅಧ್ಯಯನವನ್ನು ಸರ್ಕಾರ ನಡೆಸಲಿದೆ. ಇದರ ಆಧಾರದ ಮೇಲೆ ಸರ್ಕಾರದ ಸುದ್ದಿ ಮತ್ತು ಜಾಹೀರಾತು ವಿಷಯಗಳಲ್ಲಿ ಬದಲಾವಣೆಯಾಗಲಿದೆ.