ನವದೆಹಲಿ (PTI): ಪ್ರಯೋಗಾಲಯಗಳ ಮೂಲಕ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ 65 ಸಾವಿರ ನಕಲಿ ರೋಗಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಎರಡು ಪ್ರಯೋಗಾಲಯಗಳಲ್ಲಿ, 2023ರ ಫೆಬ್ರುವರಿಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಸುಮಾರು 22 ಲಕ್ಷ ರೋಗಪತ್ತೆ ಪರೀಕ್ಷೆಗಳು ನಡೆದಿವೆ. ಅವುಗಳಲ್ಲಿ 65 ಸಾವಿರ ಪರೀಕ್ಷೆಗಳು ನಕಲಿ ಎಂದು ತಿಳಿದುಬಂದಿದೆ. ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಗಳ ಹೆಸರಿನಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೋಗಪತ್ತೆ ಪರೀಕ್ಷೆಗಾಗಿ ಈ ಪ್ರಯೋಗಾಲಯಗಳಿಗೆ ದೆಹಲಿ ಸರ್ಕಾರವು ₹ 4.63 ಕೋಟಿ ನೀಡಿದೆ.
ದೆಹಲಿ ಸರ್ಕಾರದ ನಿಯಂತ್ರಣದಲ್ಲಿರುವ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ನಡೆಯುತ್ತಿದೆ ಎನ್ನಲಾದ ಅವ್ಯವಹಾರಗಳ ಕುರಿತು ಸಿಬಿಐನಿಂದ ತನಿಖೆ ನಡೆಸಬೇಕು ಎಂದು ದೆಹಲಿ ಲೆಫ್ಟಿನಂಟ್ ಗವರ್ನರ್ ವಿ.ಕೆ. ಸಕ್ಸೆನಾ ಅವರು ಕಳೆದ ತಿಂಗಳು ಶಿಫಾರಸು ಮಾಡಿದ್ದರು. ಅದರಂತೆ ಗೃಹ ಸಚಿವಾಲಯವು ಸಿಬಿಐ ತನಿಖೆ ನಡೆಸಲು ನಿರ್ದೇಶನ ನೀಡಿತ್ತು.