ನವದೆಹಲಿ: 2023-24ನೇ ಹಣಕಾಸು ವರ್ಷದ ಡಿಸೆಂಬರ್ ಅಂತ್ಯದವರೆಗೆ ಅಡಿಕೆ ಅಕ್ರಮ ಆಮದಿನ 416 ಪ್ರಕರಣಗಳನ್ನು ಪತ್ತೆ ಹಚ್ಚಿ 6,760 ಟನ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದರು.
ನವದೆಹಲಿ: 2023-24ನೇ ಹಣಕಾಸು ವರ್ಷದ ಡಿಸೆಂಬರ್ ಅಂತ್ಯದವರೆಗೆ ಅಡಿಕೆ ಅಕ್ರಮ ಆಮದಿನ 416 ಪ್ರಕರಣಗಳನ್ನು ಪತ್ತೆ ಹಚ್ಚಿ 6,760 ಟನ್ ಅಡಿಕೆ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದರು.
ಲೋಕಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 'ಕೇಂದ್ರೀಯ ಪರೋಕ್ಷ ತೆರಿಗೆ ಹಾಗೂ ಸುಂಕ ಮಂಡಳಿಯ ತನಿಖಾ ತಂಡವು 2020-21ರಲ್ಲಿ 278 ಪ್ರಕರಣಗಳನ್ನು ಪತ್ತೆ ಹಚ್ಚಿ 3,449 ಟನ್ ವಶಪಡಿಸಿಕೊಂಡಿತ್ತು.
'ತನಿಖಾ ತಂಡವು ಅಡಿಕೆಯ ಅಕ್ರಮ ಸಾಗಣೆ ಮೇಲೆ ನಿಗಾ ಇಟ್ಟಿದೆ. ದೇಶದ ರೈತರ ಹಿತ ರಕ್ಷಿಸಲು ಬದ್ಧವಾಗಿದೆ' ಎಂದು ಅವರು ತಿಳಿಸಿದರು.
'ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಆಮದು ಪ್ರಮಾಣ ಹೆಚ್ಚಳ ಗಮನಿಸಿದ ಸಚಿವಾಲಯವು, ಅಡಿಕೆಯ ಆಮದಿನ ಕನಿಷ್ಠ ದರವನ್ನು ಪ್ರತಿ ಕೆ.ಜಿ.ಗೆ ₹251ಯಿಂದ ₹351ಕ್ಕೆ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ. ನಮ್ಮ ರೈತರ ಹಿತರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಸುಪಾರಿಯ ಆಮದು ನೀತಿಯನ್ನು ಉಚಿತದಿಂದ ನಿಷೇಧಿತ ಎಂದೂ ಪರಿಷ್ಕರಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದರು.