HEALTH TIPS

ಪರೀಕ್ಷೆ ಸಮಯದಲ್ಲಿ ಮಕ್ಕಳ ಮಾನಸಿಕ ಒತ್ತಡ ಕಡಿಮೆ ಮಾಡಲು ಮೋದಿ ಹೇಳಿದ 6 ಸೂತ್ರಗಳು

 ಫೆಬ್ರವರಿ ತಿಂಗಳು ಬಂತೆಂದರೆ ಮಕ್ಕಳಲ್ಲಿ ಪರೀಕ್ಷೆ ಭಯ ಶುರುವಾಗುವುದು, ಪ್ರಿಪರೇಟರಿ, ವಾರ್ಷಿಕ ಪರೀಕ್ಷೆ ನಡೆಯುವುದು. ಈ ಅವಧಿಯಲ್ಲಿ ಮಕ್ಕಳು ಮಾತ್ರವಲ್ಲ ಪೋಷಕರು, ಶಿಕ್ಷಕರು ತುಂಬಾನೇ ಒತ್ತಡಕ್ಕೆ ಒಳಗಾಗುತ್ತಾರೆ.


ಪೋಷಕರ-ಶಿಕ್ಷಕರು ಮಕ್ಕಳ ಮೇಲೆ ಹಾಕುವ ಒತ್ತಡದಿಂದಾಗಿ ಮಕ್ಕಳು ತುಂಬಾನೇ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಮಕ್ಕಳಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡಲು ಮೋದಿಯವರು ಪರೀಕ್ಷಾ ಪೆ ಚರ್ಚಾ ಎಂಬ ಕಾರ್ಯಕ್ರಮ ನಡೆಸಿ ಅದ್ಭುತವಾದ ಟಿಪ್ಸ್ ನೀಡಿದ್ದಾರೆ. ಈ ಟಿಪ್ಸ್ ಖಂಡಿತ ಮಕ್ಕಳ ಸಾಧನೆಗೆ ಸಹಾಯವಾಗಲಿದೆ ನೋಡಿ:

ಮಕ್ಕಳು ಮಾನಸಿಕ ಒತ್ತಡ ತೆಗೆದುಕೊಳ್ಳಬಾರದು ಪ್ರತಿವರ್ಷ ವಿದ್ಯಾರ್ಥಿಗಳ ಬ್ಯಾಚ್ ಬದಲಾಗುತ್ತಲೇ ಇರುತ್ತದೆ, ಅವರು ಅನೇಕ ಸವಾಲುಗಳನ್ನು ಎದುರಿಸುತ್ತಲೇ ಇರುತ್ತಾರೆ, ಆದರೆ ಶಿಕ್ಷಕರು ಬದಲಾಗುವುದಿಲ್ಲ. ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಸಲಹೆ ನೀಡಬೇಕು, ಮಕ್ಕಳು ಒತ್ತಡದಿಂದಾಗಿ ಅಳಬಾರದು, ಜೀವನದಲ್ಲಿ ಒತ್ತಡ ಹೆಚ್ಚುತ್ತಲೇ ಇರುತ್ತದೆ, ಅತಿಯಾಗಿ ಒತ್ತಡ ತೆಗದುಕೊಳ್ಳಬೇಡಿ, ಆರಾಮವಾಗಿ ಓದಿ ಎಂಬ ಸಲಹೆ ನೀಡಿದ್ದಾರೆ.
ಪೋಷಕರಿಗೆ ಪ್ರಧಾನಿಯ ಕಿವಿಮಾತು ನಿಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ ಎಂದು ಪ್ರಧಾನಿ ಪೋಷಕರಿಗೆ ಹೇಳಿದ್ದಾರೆ. ಬಹುತೇಕ ಪೋಷಕರು ಈ ತಪ್ಪುಗಳನ್ನು ಮಾಡುತ್ತಾರೆ, ಇದನ್ನು ಮಾಡಲೇಬಾರದು. ಬದಲಿಗೆ ಮಕ್ಕಳಿಗೆ ಪೋಷಕರು ಆತ್ಮವಿಶ್ವಾಸವನ್ನು ತುಂಬಬೇಕು. ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಮೇಲೆ ತುಂಬಾ ಒತ್ತಡ ಹಾಕುವುದನ್ನು ಬಿಡಬೇಕು. ಬೇರೆಯವರ ಜೊತೆ ಮಕ್ಕಳ ಬಗ್ಗೆ ದೂರು ಹೇಳಬೇಡಿ ನಿಮ್ಮ ಸ್ವಂತ ಮಕ್ಕಳ ನಡುವೆ ಕೂಡ ಹೋಲಿಕೆ ಮಾಡಬೇಡಿ. ಈ ರೀತಿ ಹೋಲಿಕೆ ಮಾಡುವುದರಿಂದ ಈ ತಾರತಮ್ಯವು ವೈಷಮ್ಯವಾಗಿ ಬದಲಾಗಬಹುದು. ಅಲ್ಲದೆ ಹೆತ್ತವರು ಯಾರನ್ನಾದರೂ ಭೇಟಿಯಾದಾಗ, ಅವರು ತಮ್ಮ ಮಗುವಿನ ಬಗ್ಗೆ ಹೇಳುತ್ತಾರೆ, ಅದು ಆ ಮಗುವಿನ ಮನಸ್ಸಿನಲ್ಲಿ ಪ್ರಭಾವವನ್ನು ಉಂಟುಮಾಡುತ್ತದೆ, ಆದ್ದರಿಂದ ಪೋಷಕರು ಈ ಬಗ್ಗೆ ಜಾಗ್ರತೆವಹಿಸಬೇಕು ಎಂದು ಹೇಳಿದ್ದಾರೆ.

ವಿದ್ಯಾರ್ಥಿಯೊಂದಿಗೆ ಶಿಕ್ಷಕರ ಬಾಂಧವ್ಯ ಚೆನ್ನಾಗಿರಬೇಕು ಮೊದಲ ದಿನದಿಂದಲೂ ಪರೀಕ್ಷೆಯವರೆಗೂ ವಿದ್ಯಾರ್ಥಿಯೊಂದಿಗೆ ಶಿಕ್ಷಕರ ಬಾಂಧವ್ಯ ಉತ್ತಮವಾಗಿರಬೇಕು. ವಿದ್ಯಾರ್ಥಿಗಳೊಂದಿಗೆ ಬಾಂಧವ್ಯ ಚೆನ್ನಾಗಿದ್ದರೆ ಸಣ್ಣಪುಟ್ಟ ಸಮಸ್ಯೆಗಳಾದಾಗಲೂ ಅವರು ಖಂಡಿತವಾಗಿಯೂ ನಿಮ್ಮೊಂದಿಗೆ ಮಾತನಾಡುತ್ತಾರೆ ಎಂದು ಶಿಕ್ಷಕರಿಗೆ ಸಲಹೆ ನೀಡಿದ್ದಾರೆ. ಪೋಷಕರು ಬಂದಾಗ ಶಿಕ್ಷಕರು ಮಕ್ಕಳನ್ನು ಹೊಗಳುವುದರಿಂದ ಪೋಷಕರು ನಾವು ಮಕ್ಕಳ ಕಡೆ ಹೆಚ್ಚಿನ ಗಮನಹರಿಸಬೇಕೆಂದು ಯೋಚಿಸುತ್ತಾರೆ. 
ಪರೀಕ್ಷೆ ದಿನ ಮಕ್ಕಳಿಗೆ ಹೊಸ ಪೆನ್ನು ಕೊಡಿಸಬೇಡಿ ಬಹುತೇಕ ಪೋಷಕರು ಈ ರೀತಿ ಮಾಡುತ್ತಾರೆ, ಆದರೆ ಮೋದಿಯವರು ಮಕ್ಕಳಿಗೆ ಪರೀಕ್ಷೆ ದಿನ ಹೊಸ ಪೆನ್ನು ಕೊಡಿಸಬೇಡಿ, ಅವರು ಪ್ರತಿನಿತ್ಯ ಬಳಸಿದ ಪೆನ್ನನ್ನೇ ಬಳಸಲಿ ಎಂದು ಸಲಹೆ ನೀಡಿದ್ದಾರೆ, ಹೊಸ ಪೆನ್ನಿಗಿಂದ ಬರೆದು ಅಭ್ಯಾಸವಾದ ಪೆನ್ನು ಬಳಸಿದರೆ ಸರಾಗವಾಗಿ ಬರೆಯಬಹುದು, ಅಲ್ಲದೆ ಈ ಸಮಯದಲ್ಲಿ ಮಕ್ಕಳಿಗೆ ಆರಾಮದಾಯಕವಾಗಿ ಇರುವಂತೆ ವಾತಾವರಣ ಸೃಷ್ಟಿಸಿ ಎಂದು ಪೋಷಕರಿಗೆ ಸಲಹೆ ನೀಡಿದರು. 
ಆರಾಮವಾಗಿರಿ ಮಕ್ಕಳ ಜೊತೆ ತಮಾಷೆ ಮಾಡಿ, ಅವರು ಆರಾಮವಾಗಿ ಇರುವಂತೆ ನೋಡಿಕೊಳ್ಳಿ, ಈಜಲು ತಿಳಿದಿದ್ದರೆ ನೀರಿಗೆ ಹೋಗುವ ಭಯವಿಲ್ಲ. ಅದರಂತೆ ನೀವು ವಿಷಯವನ್ನು ಚೆನ್ನಾಗಿ ಅಭ್ಯಾಸ
ಮಾಡಿ. ಅಲ್ಲದೆ ಬೇರೆ ವಿದ್ಯಾರ್ಥಿಯು ಪರೀಕ್ಷಾ ಹಾಲ್‌ನಲ್ಲಿ ಎಷ್ಟು ವೇಗವಾಗಿ ಬರೆಯುತ್ತಿದ್ದಾರೆ, ನಿಮ್ಮ ಪಕ್ಕದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನು ಮರೆತುಬಿಡಿ, ದೀರ್ಘ ಉಸಿರು ತೆಗೆದು ಸಮಧಾನ ಉತ್ತರ ಬರೆಯಿರಿ ಎಂಬ ಸಲಹೆ ನೀಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries